ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) :  ಅಂಕೋಲಾ ತಾಲೂಕಿನ ಬೇಲೆಕೇರಿ ಬಂದರಿನಿಂದ(Belekeri Port)  ಕಬ್ಬಿಣದ ಅದಿರನ್ನ(Iron Ore) ಅಕ್ರಮವಾಗಿ ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ  ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್(MLA Satish Sail) ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಳು ದಿನಗಳ ಕಾಲ ವೈದ್ಯಕೀಯ ಮಧ್ಯಂತರ ಜಾಮೀನು(Interim Bail) ಮಂಜೂರು ಮಾಡಿದೆ.

ಸತೀಶ್ ಸೈಲ್ ಅವರು ಅನಾರೋಗ್ಯದಲ್ಲಿದ್ದಾರೆ. ದೀರ್ಘಕಾಲದಿಂದ ಲಿವರ್ ಸೈರೋಸಿಸ್ ಮತ್ತು ಸ್ಲೀಪ್ ಆಪ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು ಈ ಕಾರಣಕ್ಕಾಗಿ  ಅವರ ಪರ ವಕೀಲರು ವೈದ್ಯಕೀಯ ಮಧ್ಯಂತರ ಜಾಮೀನಿಗೆ ಕೋರಿಕೊಂಡಿದ್ದರು. ಕೋರ್ಟ್ ವಿಚಾರಣೆ ನಡೆಸಿ, ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಏಳು ದಿನಗಳ ಕಾಲ ಜಾಮೀನು ನೀಡಲು ಒಪ್ಪಿಗೆ ನೀಡಿದೆ.

ಇಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ  ಸತೀಶ್ ಸೈಲ್ ಅವರನ್ನು ಸಪ್ಟೆಂಬರ್ 9ರಂದು  ಬಂಧಿಸಲಾಗಿತ್ತು.  ಪ್ರಕರಣಕ್ಕೆ ಸಂಬಂಧಿಸಿ ಇಸಿಐಆ‌ರ್ ದಾಖಲಿಸಿಕೊಂಡ ಇಡಿ, ತಮ್ಮ ತನಿಖೆಯ ಭಾಗವಾಗಿ ಆಗಸ್ಟ್ 13 ಮತ್ತು 14ರಂದು ಸತೀಶ್ ಸೈಲ್(Satish Sail) ಅವರ ಕಾರವಾರ ಮತ್ತು ಬೆಂಗಳೂರಿನ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಈ ದಾಳಿಯ ವೇಳೆ, ಅಧಿಕಾರಿಗಳು ಸುಮಾರು 14  ಕೋಟಿಗೂ ಹೆಚ್ಚು ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಇದೀಗ ಶಾಸಕ ಸೈಲ್ ಅವರಿಗೆ ಕೊಂಚ ರಿಲೀಪ್ ಸಿಕ್ಕಿದಂತಾಗಿದೆ.
ಇದನ್ನು ಓದಿ : ಶಿರಸಿ ಮಾರಿಕಾಂಬಾ ದೇವಾಲಯ ರಸ್ತೆ ಅಗಲೀಕರಣ ಯಾವಾಗ ಮಾಡುತ್ತೀರಿ? ಶಾಸಕರೇ, ಸಂಸದರೇ!

ಕೊಲ್ಲೂರು ಮೂಕಾಂಬಿಕೆಗೆ ವಜ್ರದ ಕಿರೀಟ ಅರ್ಪಿಸಿದ ಸಂಗೀತ ಮಾಂತ್ರಿಕ.

ಕಂದಾಯ ಇಲಾಖೆಯಲ್ಲಿ ಏಜೆಂಟರ ಹಾವಳಿ. ಸಚಿವ ಮಂಕಾಳ ವೈದ್ಯ ಕಿಡಿಕಿಡಿ.