ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ಭಾರತ ಮತ್ತು ಪಾಕಿಸ್ಥಾನ (India Pakistan) ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನಲೆಯಲ್ಲಿ ಕಾರವಾರದಲ್ಲಿ ಆಪರೇಷನ್ ಅಭ್ಯಾಸ್ (Operation Abhyas) ಅಣಕು ಕಾರ್ಯಾಚರಣೆ ನಡೆಸಲಾಯಿತು.

ಬಿಣಗಾದ ಗ್ರಾಸಿಂ (Binaga Grasim) ಅನಿಲ ಘಟಕದಲ್ಲಿ ಬಾಂಬ್ ದಾಳಿಯಿಂದ ಹಾನಿಗೀಡಾದ ಕಟ್ಟಡದಲ್ಲಿ ಸಿಲುಕಿದ್ದ 37 ಮಂದಿಯ ಸುರಕ್ಷಿತ ರಕ್ಷಣೆ, ಕೈಗಾ(Kaiga) ಅಣು ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಿಂದ 11 ಮಂದಿಯ ಸುರಕ್ಷಿತ ರಕ್ಷಣೆ, ಅಮದಳ್ಳಿಯ ನೌಕಾನೆಲೆ(Amadalli Naval) ಪ್ರದೇಶದ ಸಿವಿಲ್ ಕಾಲೋನಿಯಲ್ಲಿ ಬೆಂಕಿ ಆಕಸ್ಮಿಕದಿಂದ 11 ಮಂದಿಯನ್ನು ಸುರಕ್ಷಿತ ರಕ್ಷಣೆ, ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ದಾಳಿಯಿಂದ ಗಾಯಗೊಂಡ 10 ಜನರ ರಕ್ಷಣೆ ಮಾಡಲಾಯಿತು.

ಸೋಮವಾರ ಸಂಜೆ ಆರುವರೆ ಗಂಟೆ ಸುಮಾರಿಗೆ ರವೀಂದ್ರನಾಥ್ ಕಡಲತೀರದಲ್ಲಿ (Ravindranath beach) ಬಾಂಬ್ ಸ್ಫೋಟ ಸಂಭವಿಸಿ ಹಲವರು ಗಾಯಗೊಂಡರು. ದಾಳಿಯಿಂದ ಗಾಯಗೊಂಡವರನ್ನು ರಕ್ಷಿಸಿ ಇಡೀ ಬೀಚ್‌ನಲ್ಲಿದ್ದ ಸಾವಿರಾರು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಕೈಗಾ ಅಣು ವಿದ್ಯುತ್ ಸ್ಥಾವರದ ಅಣು ವಿಕಿರಣ ಸೋರಿಕೆಯ ಮುನ್ನೆಚ್ಚರಿಕಾ ಕ್ರಮವಾಗಿ ಹರ್ಟುಗಾ ಗ್ರಾಮದ ಎಲ್ಲಾ ನಾಗರೀಕರ ಸ್ಥಳಾಂತರಿಸಲಾಯಿತು.

ಯುದ್ದದಂತಹ ತುರ್ತು ಸಂದರ್ಭದಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸುವ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕೇಂದ್ರ ಗೃಹಸಚಿವಾಲಯದ ನಿರ್ದೇಶನದಂತೆ ಸೋಮವಾರ ಕಾರವಾರದ ವಿವಿಧ ಭಾಗಗಳಲ್ಲಿ ಕೈಗೊಂಡ “ಆಪರೇಷನ್ ಅಭ್ಯಾಸ್”(Operation Abhyas) ನಾಗರೀಕ ರಕ್ಷಣಾ ಮಾದರಿಯ ಅಣಕು ಕಾರ್ಯಚರಣೆ ನಡೆಯಿತು.

ಕಾರ್ಯಾಚರಣೆಯಲ್ಲಿ ನೌಕಾಪಡೆ(Naval), ಕೋಸ್ಟ್ ಗಾರ್ಡ್(Coast Guard), ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ(CISF), ಎನ್.ಡಿ.ಆರ್.ಎಫ್(NDRF), ಪೊಲೀಸ್(Police), ಕರಾವಳಿ ಪೊಲೀಸ್(Coastal Police), ರೈಲ್ವೆ ರಕ್ಷಣಾ ಪಡೆ(Railway Defence Force), ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ(Fire and Emergency service Department), ಗೃಹ ರಕ್ಷಕ ದಳ(Home Guard), ಕಂದಾಯ(Revenue), ಆರೋಗ್ಯ(Health), ಮೀನುಗಾರಿಕೆ(Fisharies), ನಗರಸಭೆ(CMC) ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಎನ್.ಎಸ್.ಎಸ್(NSS)., ಎನ್.ಸಿ.ಸಿ(NCC) ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಘಟನೆಗಳ ಸದಸ್ಯರು  ಭಾಗವಹಿಸಿದ್ದರು.

ಸಂಜೆ 7.30 ರಿಂದ 8 ಗಂಟೆಯ ಅವಧಿಯಲ್ಲಿ ಬ್ಲ್ಯಾಕ್ ಔಟ್ ಕಾರ್ಯಾಚರಣೆ (Black Out Operation) ನಡೆಸಲಾಗಿದ್ದು, ಈ ಅವಧಿಯಲ್ಲಿ ಸೈರನ್ ಮೊಳಗಿದ ತಕ್ಷಣ ಕಾರವಾರ ನಗರಪ್ರದೇಶದಲ್ಲಿ ಸಾರ್ವಜನಿಕರು ತಮ್ಮ ಮನೆಗಳ ಕಿಟಕಿ, ಬಾಗಿಲು ಮುಚ್ಚಿ, ವಿದ್ಯುತ್ ದೀಪಗಳನ್ನು ಬಂದ್ ಮಾಡಿ ಕತ್ತಲು ಮಾಡಿದರು. ವಾಹನ ಸವಾರರು ತಾವು ಚಲಾಯಿಸುತ್ತಿದ್ದ ವಾಹನಗಳನ್ನು ಬಂದ್ ಮಾಡಿ ಹೆಡ್ ಲೈಟ್ ಆರಿಸಿ ರಸ್ತೆಯ ಪಕ್ಕದಲ್ಲಿ ಸುರಕ್ಷಿತವಾಗಿ ನಿಂತು ಬ್ಲ್ಯಾಕ್ ಔಟ್ ಕಾರ್ಯಾಚರಣೆಗೆ ಸಹಕಾರ ನೀಡಿದರು. ಕೈಗಾ ಟೌನ್‌ಶಿಪ್ ನಲ್ಲಿ(ಕೈಗಾ Township) ಕೂಡಾ ಬ್ಲ್ಯಾಕ್ ಔಟ್ ಕಾರ್ಯಾಚರಣೆ ಕೈಗೊಳ್ಳಲಾಯಿತು. ಬ್ಲಾಕ್ ಔಟ್ ಕಾರ್ಯಾಚರಣೆಗಾಗಿ ಒಟ್ಟು 13 ಸೈರನ್‌ಗಳನ್ನು ಅಳವಡಿಸಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಇದ್ದರು.

ಇದನ್ನು ಓದಿ : ಪಾಕ್ ನಡವಳಿಕೆಯ ಮೇಲೆ ನಮ್ಮ ನಿರ್ಧಾರ. ಅಣ್ವಸ್ತ್ರ ಬೆದರಿಕೆಗೆ ಡೋಂಟ್ ಕೇರ್ : ನರೇಂದ್ರ ಮೋದಿ.

ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ಗುಡ್ ಬಾಯ್.