ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ(Honnavar) : ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಾರಿಬಾಗಿಲು ಸಮೀಪದ ಅರಬ್ಬೀ ಸಮುದ್ರದಲ್ಲಿ(Ocean Sea) ಮೀನುಗಾರಿಕಾ ಬೋಟ್(Fishing Boat) ಮುಳುಗಿದ ಘಟನೆ ನಡೆದಿದೆ. ಘಟನೆಯಲ್ಲಿ ಬೋಟಿನಲ್ಲಿದ್ದ ಏಳು ಜನ ಮೀನುಗಾರರನ್ನು ಸ್ಥಳೀಯ ಮೀನುಗಾರರು ಸಮಯೋಚಿತವಾಗಿ ರಕ್ಷಿಸಿದ್ದಾರೆ.
ಅಂಕೋಲಾ(Ankola) ತಾಲೂಕಿನ ಬೆಳಂಬಾರದಿಂದ(Belambar) ಮೀನುಗಾರಿಕೆಗೆ ತೆರಳಿದ್ದ ಅಭಿನಂದನ್ ಖಾರ್ವಿ ಮಾಲಿಕತ್ವದ ‘ಶ್ರೀ ನವರತ್ನ’ ಹೆಸರಿನ ಮೀನುಗಾರಿಕಾ ಬೋಟ್ಗೆ(Fishing Boat) ಸಮುದ್ರದಲ್ಲಿ ತೆರಳುತ್ತಿದ್ದ ವೇಳೆ ಹೊರಭಾಗಕ್ಕೆ ಹಾನಿಯಾಗಿದ್ದು, ಪರಿಣಾಮ ಬೋಟ್ ಮುಳುಗಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಮೀಪದಲ್ಲಿದ್ದ ಸ್ಥಳೀಯ ಮೀನುಗಾರಿಕಾ ಬೋಟ್ಗಳು ನೆರವಿಗೆ ಧಾವಿಸಿದ್ದು, ಬೋಟಿನಲ್ಲಿದ್ದ ವೆಂಕಟೇಶ್ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ್ ಖಾರ್ವಿ, ವಿಕಾಸ್ ಖಾರ್ವಿ, ವಿಘ್ನೇಶ್ ಖಾರ್ವಿ, ರಜತ್ ಬಾನಾವಳಿಕರ್ ಹಾಗೂ ಲತೇಶ್ ಖಾರ್ವಿ ಅವರನ್ನು ರಕ್ಷಿಸಲಾಗಿದೆ.
ಇಕ್ಬಾಲ್ ಅಬ್ದುಲ್ ಗಫೂರ್ ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದ್ದು, ಎಲ್ಲ ಮೀನುಗಾರರನ್ನು ಸುರಕ್ಷಿತವಾಗಿ ಕರೆಯತ್ತ ಕರೆತರಲಾಗಿದೆ. ಈ ಕುರಿತು ಹೊನ್ನಾವರ ಕರಾವಳಿ ಪೊಲೀಸ್ ಠಾಣೆಯಲ್ಲಿ(Honnavar Coastal Service Police Station) ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನು ಓದಿ : ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್. ಮೂರರಂದು ಮುಹೂರ್ತ ಫಿಕ್ಸ್.
