ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ದಿ ಚೆಂಡಿಯಾ ಗ್ರೂಪ್ ಏಜ್ಯುಕೇಶನ್ ಸೊಸೈಟಿ, ಚೆಂಡಿಯಾ ದಿ ಪೊಪ್ಯುಲರ್ ನ್ಯೂ ಇಂಗ್ಲಿಷ್ ಸ್ಕೂಲ್ ಕಾರವಾರದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಶಾಲೆಯ ಆಡಳಿತ ಕಮಿಟಿಯ ಕೊಡುಗೆಯಿಂದ ನಿರ್ಮಾಣವಾದ ನೂತನ ಕಟ್ಟಡ ಲೋಕಾರ್ಪಣೆಗೊಂಡಿದೆ.

ನಿರ್ಮಾಣವಾದ ಮೂರು ಕೊಠಡಿಗಳ ಕಟ್ಟಡವನ್ನು   ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ ಎಸ್ ಕೇಣಿ ಅವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಲಾಯಿತು. ಶ್ರೀ ವೀರ ವಿಠ್ಠಲ ಮಠದ ಪುರೋಹಿತರು ಧಾರ್ಮಿಕ ಶಾಸ್ತ್ರವನ್ನು ನೆರವೇರಿಸುವುದರ ಮೂಲಕ  ಲೋಕಾರ್ಪಣೆಯಾಯಿತು.

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ  ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷರು ಮತ್ತು  ಶಾಲೆಯ ಹಳೆಯ ವಿದ್ಯಾರ್ಥಿನಿ ರೂಪಾಲಿ ಎಸ್‌ ನಾಯ್ಕ ಅವರು ತಮ್ಮ ಗುರುಗಳಾದ ಉಷಾ ಎಸ್‌. ಕೇಣಿ ಅವರ ಜೊತೆಗೂಡಿ ಜ್ಯೋತಿ ಬೆಳಗಿಸುವುದರ ಮುಲಕ  ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಗುರುಗಳು ಮತ್ತು ಶಾಲೆಯ ಮಹತ್ವದ ಕುರಿತು ವಿವರಿಸಿದರು.

ಉದ್ಘಾಟಕರಾಗಿ ಆಗಮಿಸಿದ ಉಷಾ ಕೇಣಿ ಮಾತನಾಡಿ, ಗುರುಗಳು, ವಿದ್ಯೆಯ ಮಹತ್ವ, ಮನುಷ್ಯನು ನಡೆ-ನುಡಿ, ಆಚಾರ- ವಿಚಾರ ಚೆನ್ನಾಗಿ ರೂಢಿಸಿಕೊಂಡರೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂಬ ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಹಕಾರದಲ್ಲಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಜೇಂದ್ರ ನಾಯಕ,  ಎಸ್ ಸಿ ಕಾಮಗೊಂಡ,  ಉದಯ ನೇರಳಕಟ್ಟೆ ಹಾಗೂ ನಿವೃತ್ತ ಗುಮಾಸ್ತ ರಾಮ ಕೃಷ್ಣ ಆಗೇರ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿ ಚೆಂಡಿಯಾ ಗ್ರೂಪ್ ಏಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ವೆಂಕಟರಾಯ ಪೇಡ್ನೆಕರ ಅವರು ವಹಿಸಿದ್ದರು. ಅಮೃತ ಮಹೋತ್ಸವ ಕಮಿಟಿಯ ಅಧ್ಯಕ್ಷರಾದ  ಕೃಷ್ಣಾನಂದ ಬಾಂದೇಕರ ಪ್ರಾಸ್ತಾವಿಕ ಮಾತನಾಡಿ ಮುಂದಿನ ಯೋಜನೆಯ ಬಗ್ಗೆ ತಿಳಿಸಿದರು.

ಉಪಾಧ್ಯಕ್ಷ  ಅಜಯ ಸಾವಕಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂಡಿಯಾ ಗ್ರಾಮ ಪಂಚಾಯಿತಿಯ ಅಧ್ಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯೋಪಾಧ್ಯಾಪಕಿ ಸುಜಾತಾ ನಾಯ್ಕ ಸ್ವಾಗತಿಸಿದರು. ಶಾಲೆಯ ಮಕ್ಕಳು ಪ್ರಾರ್ಥಿಸಿ, ಸ್ವಾಗತ ಗೀತೆ ಹಾಡಿದರು. ಶಿಕ್ಷಕ ಗಣಪತಿ ಗೌಡ ಕಾರ್ಯಕ್ರಮವನ್ನು ನಿರೂಪಿಸಿದರು. ನಾರಾಯಣ ದೇವಳಿ ವಂದಿಸಿದರು.

ಕಾರ್ಯಕ್ರಮದಲ್ಲಿ ದಿ ಚೆಂಡಿಯಾ ಗ್ರೂಪ್ ಏಜ್ಯುಕೇಶನ್‌ ಸೊಸೈಟಿಯ ಹಾಗೂ ಅಮೃತ ಮಹೋತ್ಸವ ಕಮಿಟಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಶಾಲೆಯ ಹಳೆ ವಿದ್ಯಾರ್ಥಿಗಳು, ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನು ಓದಿ : ಇಡಿ ದಾಳಿಯ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್ ಮನೆಯಲ್ಲಿ ಸಿಕ್ಕಿದ್ದೇನು ಗೊತ್ತಾ?

ವಾಯುಭಾರ ಕುಸಿತ ಹಿನ್ನಲೆ. ಭಾರೀ ಗಾಳಿ ಬೀಸುವ ಸಾಧ್ಯತೆ. ಸಾರ್ವಜನಿಕರಿಗೆ  ಎಚ್ಚರಿಕೆ.