ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ (Bhatkal) : ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವಿವಿಧೆಡೆ ಅಧಿಕ ಪ್ರಮಾಣದ ಮಳೆ  ಸುರಿದಿದೆ. ಮುಂಡಳ್ಳಿಯಲ್ಲಿ(Mundalli)  ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಗಿನವರೆಗೆ ಹೆಚ್ಚು ಮಳೆ(Heavy Rain) ಸುರಿದಿದೆ.

ಕಳೆದೆರಡು ದಿನಗಳಿಂದ ಸುರಿದ ಧಾರಕಾರ ಮಳೆಗೆ ಹಲವು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಿಗ್ಗೆ ತನಕ ಒಂದೇ ದಿನಕ್ಕೆ ಭಟ್ಕಳ ತಾಲುಕಿನಲ್ಲಿ 260.4 ಮಿ.ಮೀ. ಮಳೆಯಾಗಿದೆ.

ಜಿಲ್ಲೆಯ ಅಂದಾಜು ಮಳೆಯಂತೆ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ 299 ಮಿ.ಮೀ, ಬೆಳ್ಕೆ 277 ಮಿ.ಮೀ, ಮಾವಿನಕುರ್ವೆ 268.5 ಮಿ.ಮೀ, ಮುಟ್ಟಳ್ಳಿ 265ಮಿ.ಮೀ, ಜಾಲಿ 237ಮಿ.ಮೀ, ಮಾರುಕೇರಿ 235.5ಮಿ.ಮೀ, ಬೆಂಗ್ರೆ 224.5ಮಿ.ಮೀ,  ಕೊಪ್ಪ 219.5ಮಿ.ಮೀ, ಹೆಬಳೆ 215ಮಿ.ಮೀ, ಕೈಕಿಣಿ 213 ಮಿ.ಮೀ ಮಳೆ ಸುರಿದಿದೆ.

ಕಾರವಾರ(Karwar) ತಾಲೂಕಿನ ಅಸ್ನೋಟಿಯಲ್ಲಿ 239.5ಮಿ.ಮೀ, ಮುಡಗೇರಿ  205 ಮಿ.ಮೀ ಮಳೆ ಸುರಿದರೆ, ಉಡುಪಿ ಜಿಲ್ಲೆಯ ಬೈಂದೂರಿನ ಪಡುವರಿಯಲ್ಲಿ 282ಮಿ.ಮೀ, ಯಡ್ತರೆ 267.7ಮಿ.ಮೀ, ಬ್ರಹ್ಮಾವರದ ಹರಡಿಯಲ್ಲಿ 247ಮಿ.ಮೀ ವಾರಂಬಳ್ಳಿಯಲ್ಲಿ 220 ಮಿ.ಮೀ, ಕುಂಜಾಲು 205ಮಿಮೀ,   ಇರೋಡಿಯಲ್ಲಿ 221ಮಿ.ಮೀ, ಕುಂದಾಪುರದ ಹಂಗಳೂರು 214ಮಿ.ಮೀ ಸುರಿದಿದೆ.

ಬಾರೀ ವರ್ಷಧಾರೆಯಿಂದಾಗಿ   ಭಟ್ಕಳ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66, ಸಂಶುದ್ದೀನ್ ವೃತ್ತ ಸೇರಿದಂತೆ ತಾಲ್ಲೂಕಿನ ಪ್ರಮುಖ ರಸ್ತೆಗಳೆಲ್ಲ ಸಂಪೂರ್ಣ ನೀರಿನಿಂದ ಜಲಾವೃತಗೊಂಡಿತ್ತು. ಮಳೆಯಿಂದ ಉಡುಪಿ ಜಿಲ್ಲೆಯ ಹಲವಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದವು.

ಇದನ್ನು ಓದಿ : ಬಾರೀ ಮಳೆ ಹಿನ್ನಲೆ. ನಾಳೆ ಶಾಲಾ ಕಾಲೇಜುಗಳಿಗೆ ರಜೆ.

ಭಟ್ಕಳದ ಈ ಮಾರ್ಗದಲ್ಲಿ ಸಂಚಾರ ನಿಷೇಧ – ಪರ್ಯಾಯ ಮಾರ್ಗ ಅನುಸರಿಸಿ : ಜಿಲ್ಲಾಧಿಕಾರಿ

ಸಿದ್ದಾಪುರ, ಶಿವಮೊಗ್ಗ ಗಡಿಯಲ್ಲಿ ಲವ್ ದೋಖಾ ಜಾಲ. ಬಯಲಿಗೆಳೆದ ಯುವಕ ಆತ್ಮತ್ಯೆ. ಹಲವರ ಬಂಧನ.*