ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಖೋಲ್ ನಲ್ಲಿ ಕುಡಿದ ಮತ್ತಿನಲ್ಲಿ ಜಗಳವಾಡಿ, ಆಕ್ರೋಶದಿಂದ ಅಕ್ಕನ ಮಗನನ್ನು ಕೊಲೆ ಮಾಡಿದ ದಾರುಣ ಘಟನೆ ನಡೆದಿದೆ.  ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಚಾಸ್ಟನ್ ಇನಾಸ್ ಬೆರೆಟ್ಟೊ  (35) ಕೊಲೆಯಾದ ದುರ್ದೈವಿ. , ಜೊರಮ್ ಬೆರೆಟ್ಟೊ ಕೊಲೆ ಆರೋಪಿಯಾಗಿದ್ದಾನೆ. ವೈಯಕ್ತಿಕ ವಿಷಯಗಳಲ್ಲಿ ಉಂಟಾದ ಜಗಳ ಕೆಲ ಹೊತ್ತಿನಲ್ಲಿ ವಿಕೋಪಕ್ಕೆ ತಿರುಗಿ ಕುಡಿದ ಮತ್ತಿನಲ್ಲಿ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಅಕ್ಕನ ಮಗ ಚಾಸ್ಟನ್ ನ್ನು ಸ್ಥಳದಲ್ಲೇ ಕೊಲೆಗೈದಿದ್ದಾನೆ.

ಆರೋಪಿಯನ್ನು ಕಾರವಾರ ನಗರ ಠಾಣೆ ಪೊಲೀಸರು ತಕ್ಷಣವೇ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.  ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ತನಿಖೆ ಮುಂದುವರಿಸಲಾಗಿದೆ‌.

ಇದನ್ನು ಓದಿ : ನಾಲ್ಕು ದಶಕಗಳ ಬೇಡಿಕೆ. ಮಲ್ಪೆ ಬೋಟ್ ಕಲಾಶಿಗಳಿಂದ ಹೋರಾಟಕ್ಕೆ ನಾಂದಿ.

ಮೊದಲ ಬಾರಿ ಕಾರವಾರದಲ್ಲಿ ನಡೆದ  ಮೊಸರುಗಡಿಗೆ ಒಡೆಯುವ ರೋಚಕ ಸ್ಪರ್ದೆ.

ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಸು.ಪ್ರಮ್.ಸೋ  ಚಿತ್ರ.