ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಮುರ್ಡೇಶ್ವರ(Murdeshwar) : ಭಕ್ತರ ಸೋಗಿನಲ್ಲಿ ಮುರ್ಡೇಶ್ವರ ದೇವಸ್ಥಾನಕ್ಕೆ(Murdeshwar Temple) ಬಂದು ಚಿನ್ನ ಕದ್ದಿದ್ದ(Gold Theft) ಮಹಿಳೆಯೋರ್ವಳನ್ನ ಬಂಧಿಸಿದ ಘಟನೆ ನಡೆದಿದೆ.
ಮುರ್ಡೇಶ್ವರ ಪೊಲೀಸರು(Murdeshwar Police) ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಗದಗ ಜಿಲ್ಲೆಯ(Gadag District) ಬೆಟಗೇರಿಯ ಗಾಂಧಿ ನಗರ ಸೆಟ್ಲಮೆಂಟ್ ನಿವಾಸಿ ಗಂಗಮ್ಮ (65) ಎಂಬಾಕೆಯನ್ನು ಮುರ್ಡೇಶ್ವರ ರೈಲ್ವೆ ನಿಲ್ದಾಣದಲ್ಲಿ(Murdeshwar Railway Station) ವಶಕ್ಕೆ ಪಡೆಯಲಾಗಿದೆ.
ಬಂಧಿತ ಗಂಗಮ್ಮಳಿಂದ ಒಟ್ಟು 3,28,000 ರೂ. ಮೌಲ್ಯದ ಬಂಗಾರದ ಗಟ್ಟಿಯನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಏಪ್ರಿಲ್ 24, 2026 ರಂದು ಕೇರಳದ ಕಣ್ಣೂರು(Keral Kannuru) ಮೂಲದ ಜೈಯಂತ ಎ.ವಿ. ವೇಣುಗೋಪಾಲ ಎಂಬುವವರು ತಮ್ಮ ಕುಟುಂಬದೊಂದಿಗೆ ಮುರ್ಡೇಶ್ವರಕ್ಕೆ(Murdeshwar) ಭೇಟಿ ನೀಡಿದ್ದಾಗ, ದೇವಸ್ಥಾನದ ಆವರಣದಲ್ಲಿ ಅವರ ತಾಯಿಯ ಕತ್ತಿನಲ್ಲಿದ್ದ ಅಂದಾಜು 36 ಗ್ರಾಂ ತೂಕದ ಚಿನ್ನದ ಸರ ಕಳ್ಳತನವಾಗಿತ್ತು. ಈ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ(Murdeshwar Police Station) ಪ್ರಕರಣ ದಾಖಲಿಸಿದ್ದರು.
ತಕ್ಷಣವೇ ತನಿಖೆಗೆ ಇಳಿದ ಮುರ್ಡೇಶ್ವರ ಪೊಲೀಸರು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಬಂಧಿತ ಮಹಿಳೆಯನ್ನು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರೋದು ಗೊತ್ತಾಗಿದೆ. ಕದ್ದ ಬಂಗಾರ ಸರವನ್ನು ಕರಗಿಸಿ ಗಟ್ಟಿ ಮಾಡಿದ್ದಳು. ಒಟ್ಟು 27.600 ಗ್ರಾಂ ತೂಕದ (ಅಂದಾಜು ಮೌಲ್ಯ 3,28,000/- ರೂ.) ಎರಡು ಬಂಗಾರದ ಗಟ್ಟಿಗಳನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿ : ಕ್ವಿಂಟಲ್ ಗಟ್ಟಲೇ ಮಟನ್, ಚಿಕನ್ ವೇಸ್ಟ್ ಮಾಡಿಸಿದ ವಧು. ಮದುವೆಗೆ ಮುಂಚೆ ಪ್ರಿಯಕರನೊಂದಿಗೆ ಎಸ್ಕೇಪ್ .
