ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಶಿರಸಿ(Sirsi) : ಇಂದು ಬೆಳಗಿನ ಸಂದರ್ಭದಲ್ಲಿ ಮದುವೆಯಾಗಬೇಕಿದ್ದ ಮದುಮಗಳೊಬ್ಬಳು ಕೆಲ ಗಂಟೆಗಳ ಮುಂಚೆ ತನ್ನ ಪ್ರಿಯಕರನೊಂದಿಗೆ ಓಡಿ ಹೋದ(Lovers Escape) ಘಟನೆ ಶಿರಸಿಯಲ್ಲಿ ನಡೆದಿದೆ.
ಶಿರಸಿಯ ಮುಸ್ಲಿಂ ಗಲ್ಲಿಯ(Sirsi Muslim Galli) ಸಿಫಾ(25) ಎಂಬಾಕೆ ನಿಶ್ಚಯವಾದ ವರನ ಬಿಟ್ಟು ಪರಾರಿಯಾದಾಕೆ. ಈಕೆಗೆ ಎಂಬಿಬಿಎಸ್(MBBS) ಕಲಿಯುತ್ತಿರುವ ಯುವಕನೊಂದಿಗೆ ಪ್ರೀತಿ ಇತ್ತು ಎಂದು ಹೇಳಲಾಗುತ್ತಿದೆ. ಪಾಲಕರು ಮಗಳಿಗೆ ತರಾತುರಿಯಲ್ಲಿ ಬೇರೆ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು.
ಇಂದು ಶನಿವಾರ ಶಿರಸಿಯ ಹುಸುರಿ ರಸ್ತೆಯಲ್ಲಿರುವ(Sirsi Husri Road) ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಆದರೆ ವಧು ಇಂದು ಬೆಳ್ಳಂಬೆಳಿಗ್ಗೆ ತಾನು ಪ್ರೀತಿಸುತ್ತಿದ್ದ ಎಂಬಿಬಿಎಸ್ ಕಲಿಯುತ್ತಿರುವ ರಾಮನಬೈಲ್(Ramanabail) ಯುವಕನೊಂದಿಗೆ ಎಸ್ಕೇಪ್ ಆಗಿದ್ದಾಳೆ.
ಇದರಿಂದ ಕಂಗಾಲಾದ ವರ ಮತ್ತು ವಧುವಿನ ಕುಟುಂಬದವರು ಘಟನೆಯಿಂದ ಗೊಂದಲಕ್ಕೀಡಾದರು. ವಿವಾಹ ಸಲುವಾಗಿ ತಂದ 22 ಕುರಿಯ ಕ್ವಿಂಟಲ್ ಗಟ್ಟಲೆ ಮಟನ್ ಹಾಗೂ ಚಿಕನ್ ಅಡುಗೆ ಮಾಡಲಾಗದೆ ವೇಸ್ಟ್ ಕೂಡ ಆಯಿತು. ನಾಪತ್ತೆಯಾದ ತನ್ನ ಮಗಳನ್ನು ಹುಡುಕಿಕೊಡುವಂತೆ ಯುವತಿಯ ತಂದೆ ಝಹೀರ್ ಖಾನ್ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ(Sirsi Market Police Station) ಪ್ರಕರಣ ದಾಖಲಿಸಿದ್ದಾರೆ. ಮದುವೆಯ ಖರ್ಚು ನೀಡುವಂತೆ ವರನ ಕಡೆಯವರು ವಧುವಿನ ಮನೆಯವರಲ್ಲಿ ಹೇಳಿದ್ದಾರಂತೆ. ಸಂಬಂಧಿಕರ ಮಧ್ಯಸ್ಥಿಕೆಯಿಂದ ವಿಷಯ ಕೊಂಚ ತಿಳಿಯಾಗಿದೆ. ಮುಂದೇನಾಗುತ್ತೋ ನೋಡಬೇಕಾಗಿದೆ.
