ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) :  ನಂದನಗದ್ದಾ ಗ್ರಾಮದ  ಜಾಗ್ರತ ದೇವರೆಂದೇ ಪ್ರಸಿದ್ದಿ ಪಡೆದ ಶ್ರೀ ನಾಗನಾಥ ದೇವರ(Sri Naganath Devaru) ವಾರ್ಷಿಕೋತ್ಸವ ಅದ್ದೂರಿಯಿಂದ ನಡೆಯಿತು

ಮಾಘಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಶುಕ್ರವಾರದಂದು ಗ್ರಾಮಸ್ತರ ಸಮ್ಮುಖದಲ್ಲಿ ಪಾರಂಪರಿಕ ಉತ್ಸವ (Traditional Utsav) ಜರುಗಿತು. ಪರಂಪರೆಯ ಅನುಸಾರ ಗ್ರಾಮಸ್ಥರು ಶ್ರೀದೇವರಿಗೆ ಅಕ್ಕಿಯನ್ನು ಸಮರ್ಪಿಸಿದರು.  ಶ್ರೀ ನಾಗನಾಥ ದೇವರ ಅಭಿಷೇಕ,  ತುಲಾಭಾರ  ಪೂಜೆ ಬಳಿಕ ಪ್ರಸಾದ ವಿತರಿಸಲಾಯಿತು. ಕಾರವಾರ ಮತ್ತು ಸುತ್ತಮುತ್ತಲಿನ ಭಕ್ತರು(Devotees) ದೇವಾಲಯಕ್ಕೆ ಆಗಮಿಸಿ ಹಣ್ಣು ಕಾಯಿ ನೀಡಿ ದೇವರ ದರ್ಶನ ಪಡೆದರು.

ತುಲಾಭಾರ ಸೇವೆ ಸಲ್ಲಿಸಿದ ಶಾಸಕ ಸತೀಶ್ ಸೈಲ್ :ಕಾರವಾರ ಶಾಸಕ ಸತೀಶ್ ಸೈಲ್(MLA Satish Sail) ತಮ್ಮ ಸಹೋದರ ಶ್ಯಾಮ್ ಸೈಲ್ ಅವರೊಂದಿಗೆ ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅವರ ಅಭಿಮಾನಿಗಳು ಹಾಜರಿದ್ದು ಸಕ್ಕರೆ ಮತ್ತು ನಾಣ್ಯದ ತುಲಾಭಾರ ನಡೆಸಿಕೊಟ್ಟರು. ವಿಶೇಷವಾಗಿ ಯುವರಾಜ್ ಗಾಂವಕರ್ ಮತ್ತು ರುಜಾರ್ ಆಲ್ಪಾನ್ಸ್  ಅವರು ಈ ಹಿಂದೆ ಹೇಳಿಕೊಂಡಂತೆ ಹರಕೆ ತೀರಿಸಿದರು.

ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಆಡಳಿತ ಮಂಡಳಿಯ  ಅಧ್ಯಕ್ಷರಾದ ನಾಗರಾಜ ವಿ. ಜೋಶಿ ಮತ್ತು ಇತರ ಸದಸ್ಯರು ಜಾತ್ರೆ ನಿರ್ವಹಣೆಯನ್ನ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಇದನ್ನು ಓದಿ : ಖೈದಿಗಳಿಗೂ ಗಂಗಾಜಲ ಸ್ನಾನ. ಯುಪಿ ಸಿಎಂ ಯೋಗಿ ಸರ್ಕಾರದಿಂದ ವ್ಯವಸ್ಧೆ.

ಹೃದಯಘಾತದಿಂದ ಕುಸಿದು ಬಿದ್ದು ಶಾಲಾ ವಿದ್ಯಾರ್ಥಿನಿ ದುರ್ಮರಣ.