ಭಟ್ಕಳ (BHATKAL): ಉತ್ತರಪ್ರದೇಶದ (UTTARAPRADESH)ಯತಿ ನರಸಿಂಹಾನಂದ ಸ್ವಾಮಿ(NARASIMHANANDA SWAMIJI) ಅವರ ನಿಂದನಾತ್ಮಕ ಹೇಳಿಕೆ ಖಂಡಿಸಿ  ಮುಸ್ಲಿಂ ನಾಗರಿಕರು  ಪ್ರತಿಭಟನೆ ನಡೆಸಿದ್ದಾರೆ. 

ಸೋಮವಾರ ಸಂಜೆ ನಗರದ ಮಿನಿ ವಿಧಾನಸೌಧದ ಎದುರು ಸೇರಿದ ನಾಗರಿಕರು ಯತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಸ್ಲಾಂ ಧರ್ಮ ಸ್ಥಾಪಕ ಮಹಮದ್ ಪೈಗಂಬರ್ (MOHAMMED PAIGAMBER) ಮತ್ತು ಕುರಾನ್(QURAN) ವಿರುದ್ದ ಉತ್ತರಪ್ರದೇಶದ ದಾಸ್ನಾದೇವಿ ದೇವಸ್ಥಾನದ ಪೀಠಾಧಿಪತಿ ಯತಿ ನರಸಿಂಹಾನಂದ ಸ್ವಾಮಿಜಿ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೀಗಾಗಿ ಅವರ ಮೇಲೆ ಮಾದರಿ ಯೋಗ್ಯ ಕಾನೂನನ್ನ ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ಇದಕ್ಕೂ ಮುನ್ನ  ಭಟ್ಕಳ ನಗರ ಠಾಣೆಯಲ್ಲಿ (BHATKAL TOWN STATION) ಪ್ರಕರಣ ತಂಜಿಮ್  ಸಂಸ್ಥೆ(TANZEEM ORGANIZATION) ಅಧ್ಯಕ್ಷ ಇನಾಯತ್ ಉಲ್ಲಾ ಶಾಬಾಂದ್ರಿ ಅವರು ದೂರು ದಾಖಲಿಸಿದ್ದಾರೆ. ಇಸ್ಲಾಂ ಧರ್ಮ ಸ್ಥಾಪಕ ಮಹಮದ್ ಪೈಗಂಬರ್ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಸ್ವಾಮಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ನರಸಿಂಹಾನಂದ ಸ್ವಾಮಿಗಳ ವಿರುದ್ದ ಉತ್ತರಪ್ರದೇಶ ಸರ್ಕಾರ ಈ ಹಿಂದೆ ಹಲವು ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗಿತ್ತು. ದೇಶದ ಗಣ್ಯ ವ್ಯಕ್ತಿಗಳ ದಾರ್ಶನಿಕರ ಬಗ್ಗೆ ಪದೇಪದೇ ಹೇಳಿಕೆ ನೀಡುವ ಅವರ ಮೇಲೆ ಕಠಿಣವಾದ ಕ್ರಮವಾಗಬೇಕು. ನಿಂದನೆ ಮೂಲಕ ಪ್ರವಾದಿ ಮಹಮದ್ ವ್ಯಕ್ತಿತ್ವ ಹಾಳಾಗುವುದಿಲ್ಲ. ಇಂಥ ವ್ಯಕ್ತಿಗಳಿಂದ ಅಶಾಂತಿ ವಾತಾವರಣ ಉಂಟಾಗುತ್ತಿದೆ. ದೇಶದ ಭದ್ರತೆಗೆ ಮಾರಕವಾಗಿದೆ. ಅತ್ಯಂತ ಮಾದರಿ ಯೋಗ್ಯವಾಗಿ ಶಿಕ್ಷಿಸಬೇಕು. ದೇಶದಲ್ಲಿ ಯಾರು ಯಾರನ್ನ ಅಗೌರವವಾಗಿ ನೋಡದಂತೆ ನೋಡಿಕೊಳ್ಳಬೇಕೆಂದು ಸರ್ಕಾರಕ್ಕೆ  ಗಣ್ಯರು ಮನವಿ ಮಾಡಿದ್ದಾರೆ. ಈ ಸಂಬಂಧ ಭಟ್ಕಳ ಸಹಾಯಕ ಕಮಿಷನರ್ ನಯನಾ ಅವರ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಮನವಿ ನೀಡಿದ್ದಾರೆ.

 ಪ್ರತಿಭಟನೆಯಲ್ಲಿ ಧರ್ಮಗುರು ಅಜೀಮ್ ಅಲೀಮ್, ತಂಜಿಮ್ ಸಂಸ್ಥೆ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಾಂದ್ರಿ, ನ್ಯಾಯವಾದಿ  ಇಮ್ರಾನ್ ಲಂಕಾ, ಶಾಂತಿ ಪ್ರಕಾಶನದ(SHANTI PRAKASHANA)  ಮಹಮದ್ ಕುಂಇ(KUNHI), ಪುರಸಭೆ ಉಪಾಧ್ಯಕ್ಷ ಅಲ್ತಾಪ್, ಮೆಡಿಕಲ್ ಸಮಿ ಸೇರಿದಂತೆ ಸಾವಿರಾರು ಸಂಖ್ಯೆಯ ಮುಸ್ಲಿಂ ನಾಗರಿಕರು ಭಾಗವಹಿಸಿದ್ದರು.

ಘಟನೆ ಖಂಡಿಸಿ ನಾಳೆ ಭಟ್ಕಳ ಬಂದ್ ಗೆ ಕರೆ ನೀಡಲಾಗಿದ್ದು, ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳು ಬಂದ್ ಮಾಡಲು ನಿರ್ಧರಿಸಲಾಗಿದೆ.

ಇದನ್ನು ಓದಿ : ಹಂತಕರ ಜಾಡು ಹಿಡಿದು ಅರಣ್ಯ ಇಲಾಖೆ ದಾಳಿ

ಅಕ್ರಮ ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ

ನೇತ್ರಾಣಿ ಗುಡ್ಡದ ಸಮೀಪ ನೌಕಾಪಡೆ ಸಮರಭ್ಯಾಸ.