ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ಅಕ್ರಮವಾಗಿ(Illegal) ಸಂಗ್ರಹಿಸಿದ್ದ ಮರಳು ರಾಶಿಯ ಮೇಲೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ(Mines And geology) ಅಧಿಕಾರಿಗಳು ದಾಳಿ ನಡೆಸಿದ ಘಟನೆ ಕಾರವಾರ(Karwar) ತಾಲೂಕಿನ ಹೋಟೆಗಾಳಿಯಲ್ಲಿ ನಡೆದಿದೆ.

ದಾಳಿ ಸಂದರ್ಭದಲ್ಲಿ ಸುಮಾರು 180 ಮೆಟ್ರಿಕ್ ಟನ್ ಮರಳನ್ನು   ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಆಶಾ ಅವರ ನೇತೃತ್ವದಲ್ಲಿ ಶುಕ್ರವಾರ ರಾತ್ರಿ  ದಿಢೀರ್  ಕಾರ್ಯಾಚರಣೆ(Quickly Operations) ನಡೆಸಲಾಗಿದೆ.

ಯಾವುದೇ ಅನುಮತಿ ಇಲ್ಲದೇ ಮರಳು‌ ಸಂಗ್ರಹಿಸಿರುವ(Sand Storage) ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಅಕ್ರಮ ಮರಳನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಕಳೆದ ಕೆಲ ತಿಂಗಳಿಂದ ಉತ್ತರಕನ್ನಡ ಜಿಲ್ಲೆಯ(Uttarakannada District) ವಿವಿಧ ಕಡೆಗಳಲ್ಲಿ ಅಕ್ರಮ ಮರಳು(Illegal Sand) ದಂಧೆ ನಡೆಯುತ್ತಿದೆ.  ಅಕ್ರಮ ಮರಳು ಮಾಫಿಯಾದ(Sand Mapiya) ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಉಪನಿರ್ದೇಶಕಿ ಆಶಾ ಆಗಾಗ ಕಾರ್ಯಾಚರಣೆ ಮಾಡುತ್ತಿದ್ದಾರೆ.

ಹೊಟೇಗಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದ್ದು,    ಅಕ್ರಮ ಮರಳು ಸಾಗಣೆ(Illegal Sand Supply) ಹಾಗೂ ಸಂಗ್ರಹಣೆ ಮಾಡುವವರಿಗೆ ಇದು ಎಚ್ಚರಿಕೆ ಎಂದು ಭಾವಿಸಲಾಗಿದೆ.

ಇದನ್ನು ಓದಿ : ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ.  ಹಲವರಿಗೆ ಗಾಯ.

ಖೈದಿಯ ಕೂಲಿ ಹಣಕ್ಕೆ ಕೈ ಚಾಚಿದ ಜೈಲರ್  ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ