ಕಾರವಾರ(Karwar) : ಅಕ್ರಮವಾಗಿ ಮದ್ಯ (Liquor) ಒಯುತ್ತಿದ್ದ ಇಬ್ಬರನ್ನ ಅಬಕಾರಿ (Exice) ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಂಗಳೂರಿನ ಅಬಕಾರಿ ಜಂಟಿ ಆಯುಕ್ತರ ಆದೇಶ ಮೇರೆಗೆ ಕಾರವಾರ ಅಬಕಾರಿ ಜಿಲ್ಲಾ ತಂಡ ತಾಲೂಕಿನಲ್ಲಿ ಗಸ್ತು ಮಾಡುತ್ತಿರುವಾಗ ಬಸ್ ನಂಬರ್ GA 03 X 0499 ಕಾರವಾರ ಬಸ್ ನಿಲ್ದಾಣದಲ್ಲಿ ಶೋಧ ಮಾಡುವಾಗ ಇಬ್ಬರು ವಿಚಿತ್ರವಾಗಿ ಕಂಡರು. ತಪಾಸಣೆ ಮಾಡಿದಾಗ, ಮೈ, ಕೈ, ಕಾಲುಗಳು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಮದ್ಯದ ಬಾಟಲಿ ಕಟ್ಟಿಕೊಂಡು ಸಾಗಿಸುತ್ತಿರೋದು ಕಂಡುಬಂದಿದೆ.
ಪ್ರವೀಣ ತಂದೆ ಪಾಂಡುರಂಗ ಗೋಕರ್ಣ, ಕಾರವಾರದ ಹೈ ಚರ್ಚ್ ನಿವಾಸಿ ಮತ್ತು ಬಾಬು ತಂದೆ ರಾಜನ್ ಪಿಳ್ಳೈ, ಸೋನಾರವಾಡ ನಿವಾಸಿ. ಇಬ್ಬರನ್ನ ದಸ್ತಗಿರಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 65.25 ಲೀ ಗೋವಾ ಮದ್ಯ ವಶಕ್ಕೆ ಪಡೆಯಲಾಗಿದೆ. ಮದ್ಯದ ಅಂದಾಜು ಮೂಲ್ಯ-52400 ರೂ. ಆಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ವಿಜಯ ಮಹಾಂತೇಶ ಲಮಾಣಿ, ಅಬಕಾರಿ ಉಪ ನಿರೀಕ್ಷಕ ನಾಗರಾಜ ಕೊಟ್ಟಿಗಿ, ಅಬಕಾರಿ ಮುಖ್ಯ ಪೇದೆ ಕುಂದಾ ನಾಯ್ಕ, ಅಬಕಾರಿ ಪೇದೆ ಕೃಷ್ಣ ನಾಯ್ಕ ಮತ್ತು ವಾಹನ ಚಾಲಕ ರವೀಂದ್ರ ನಾಯ್ಕ ಇದ್ದರು.