ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ನಮ್ಮ ಸುತ್ತಮುತ್ತಲು ಒಂದಿಲ್ಲ ಒಂದು ವಿಸ್ಮಯ(Miracle) ನಡೆಯುತ್ತಲೇ ಇರುತ್ತೆ. ಪ್ರಕೃತಿಯಲ್ಲಿ ದೇವರು ನಾನಾ ರೂಪದಲ್ಲಿ ಭಕ್ತರಿಗೆ ಕಾಣಿಸುತ್ತಲೆ ಇದೆ. ಉತ್ತರಕನ್ನಡ(Uttarkannada) ಜಿಲ್ಲೆಯ ಕಾರವಾರದ ಬಾಡದ(Karwar Baad) ಭಕ್ತರೊಬ್ಬರ ಮನೆಯಲ್ಲಿ ಶ್ರೀ ಪದ್ಮನಾಭ ಮಹಾರಾಜರು(Sri Padmanabha Maharaj )  ಪ್ರತ್ಯಕ್ಷರಾದ ಘಟನೆ ನಡೆದಿದೆ.

ಶ್ರೀ ಪದ್ಮನಾಭ ಮಹಾರಾಜರು ಎಂದು ಪ್ರಸಿದ್ಧರಾದ ಶ್ರೀಮತ್ ಪರಮಹಂಸ ಶ್ರೀ ಪದ್ಮನಾಭ ತೀರ್ಥ ಸ್ವಾಮಿಗಳು ಕಾರವಾರದ ಬಾಡದಲ್ಲಿರುವ(Karwar Baad) ಪ್ರಸಿದ್ಧ ಗುರುಮಠದ(Gurumath) ಮೂಲ ಪುರುಷರು. ಅವರು ತಮ್ಮ ಅದ್ಭುತ ಆಧ್ಯಾತ್ಮಿಕ ಬೋಧನೆ ಮತ್ತು ಸಮಾಜ ಸೇವೆಯಿಂದ ಉತ್ತರಕನ್ನಡ ಜಿಲ್ಲೆಯ ಜನಮಾನಸದಲ್ಲಿ ದೈವಿಕ ವ್ಯಕ್ತಿಯಾಗಿ ನೆಲೆಸಿದ್ದಾರೆ.

ಬಾಡದ ಪ್ರಕಾಶ ರಮೇಶ ನಾಯ್ಕ ಅವರು ಗುರುಮಠದ ಶ್ರೀ ಪದ್ಮನಾಭ ಮಹಾರಾಜರ ಭಕ್ತರು. ಕಳೆದ ಸುಮಾರು ಐವತ್ತು ವರ್ಷಗಳಿಂದ ಮಹಾರಾಜರ ಸೇವೆಯನ್ನ ಮಾಡುತ್ತಾ ಬಂದಿದ್ದಾರೆ. ತಮ್ಮ ಸೇವೆಯನ್ನ ಮುಡಿಪಾಗಿಟ್ಟಿರುವ ಪ್ರಕಾಶ ಅವರು ಬಾಡದಲ್ಲಿರುವ ತಮ್ಮ ‘ಗುರುಕೃಪಾ’ ಮನೆಯಲ್ಲಿ ಅಷ್ಟೇ ಶ್ರದ್ಧೆಯಿಂದ ಮಹಾರಾಜರು ಮತ್ತು ಶ್ರೀ ದತ್ತಾತ್ರೆಯರ ಪೂಜೆ ಮಾಡುತ್ತಾರೆ.

ಜೂನ್ 29ರಂದು ರಾತ್ರಿ ಮನೆಯಲ್ಲಿ ಕುಳಿತಿದ್ದಾಗ ಪಡಸಾಲೆಯ ಗೋಡೆಯ  ಮಹಾರಾಜರ(Maharaja) ರೂಪ ಕಂಡಿದೆ. ಹೀಗೆ ದೃಷ್ಟಿಯಿಟ್ಟು ನೋಡುತ್ತಾ ಕುಳಿತ ಅವರಿಗೆ ಮಹಾರಾಜರು ಕುಳಿತ ಭಂಗಿಯಲ್ಲಿರುವ ಪೂರ್ಣ ಚಿತ್ರ ಕಾಣಿಸಿದೆ. ಒಂದು  ಕ್ಷಣ ಭಾವಪರವಶರಾದರು. ತಮ್ಮ ಮನೆಯವರಿಗೆ ವಿಷಯ ತಿಳಿಸಿದರು.

ಅದೇ ರೀತಿ ತಮ್ಮ ಪರಿಚಯದ ಮಹಾರಾಜರ ಭಕ್ತರಿಗೆ ವಿಷಯತಿಳಿಸಿದಾಗ ಭಕ್ತರು ಪ್ರಕಾಶ ನಾಯ್ಕ ಅವರ ಮನೆಗೆ ಬಂದು ಗೋಡೆಯಲ್ಲಿನ ವಿಸ್ಮಯ ಕಂಡು ಬೆರಗಾಗುತ್ತಿದ್ದಾರೆ.
.
ಮಹಾರಾಜರು ಇನ್ನೂ ನಮ್ಮ ಜೊತೆಗೆ ಇದ್ದಾರೆಂಬುದು ಗೊತ್ತಾಗುತ್ತಿದೆ. ಶ್ರದ್ಧೆ ಹಾಗೂ ನಿಷ್ಠೆಯಿಂದ ಭಕ್ತಿ ಮಾಡಿದ್ರೆ. ದೇವರು ನಮ್ಮ ಜೊತೆಗೆ ಇದ್ದಾರೆಂಬುದು ಇದಕ್ಕೆ  ಸಾಕ್ಷಿಯಾಗಿದೆ ಎಂದು ಪ್ರಕಾಶ ನಾಯ್ಕ ಖುಷಿಯಿಂದ ಹಂಚಿಕೊಂಡಿದ್ದಾರೆ. ನೀವು ಅವರ ಮನೆಯಲ್ಲಿ ಮಹಾರಾಜರ ದರ್ಶನ ಪಡೆಯಬೇಕೆಂದರೆ  ಪ್ರಕಾಶ ಅವರ  ಮೊಬೈಲ್ ಸಂಖ್ಯೆ 9740042597 ಸಂಪರ್ಕಿಸಿ.