ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋವಾ(Goa) : ಪ್ರಧಾನಮಂತ್ರಿ ನರೇಂದ್ರ ಮೋದಿ ( PM Modi) ಅವರು ಕಾರವಾರ(Karwar) ಮತ್ತು ಗೋವಾ ಕರಾವಳಿಯ(Goa Karavali) ಅರಬ್ಬಿ ಸಮುದ್ರದಲ್ಲಿ ಐಎನ್‌ಎಸ್ ವಿಕ್ರಾಂತ್(INS Vikrant) ಯುದ್ದ ಹಡಗಿನಲ್ಲಿ ಭಾರತೀಯ ನೌಕಾಪಡೆಯ(Indian Navy) ಸಿಬ್ಬಂದಿಯೊಂದಿಗೆ ದೀಪಾವಳಿ ಹಬ್ಬ(Deepavali Festival) ಆಚರಿಸಿದರು.
ಸೊಮವಾರ ಬೆಳಿಗ್ಗೆ ಸಮವಸ್ತ್ರ ಧರಿಸಿದ ಮೋದಿ(Modi) ತಮ್ಮ ದಶಕದ ಸಂಪ್ರದಾಯವನ್ನು(Tradition) ಮುಂದುವರಿಸಿಕೊಂಡಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ(Indian Navy) ಸಾಮರ್ಥ್ಯಗಳು ಮತ್ತು ಆಪರೇಷನ್ ಸಿಂಧೂರ್(Operation Sindur) ಕಾರ್ಯಾಚರಣೆಯನ್ನು ಶ್ಲಾಘಿಸಿದರು. ಶತ್ರು ರಾಷ್ಟ್ರ ಪಾಕಿಸ್ತಾನ(Pakistan) ಮಂಡಿಯೂರಲು ನಮ್ಮ ಭದ್ರತಾ ಪಡೆಗಳ ಸಮನ್ವಯತೆ ಕಾರಣ ಎಂದರು..
ನಮ್ಮ ಸಶಸ್ತ್ರ ಪಡೆಗಳಿಗೆ ನಾನು ನಮಸ್ಕರಿಸುತ್ತೇನೆ. ಭಾರತೀಯ ನೌಕಾಪಡೆ(Indian Navy) ಪಾಕಿಸ್ತಾನಕ್ಕೆ ಬೆದರಿಸುವುದರ ಜೊತೆಗೆ ಧೈರ್ಯ, ಶೌರ್ಯ ಮತ್ತು ಸೇವೆಗಳ ಸಹಕಾರದೊಂದಿಗೆ, ಪಾಕಿಸ್ತಾನವನ್ನು ತಕ್ಷಣ ಮಂಡಿಯೂರುವಂತೆ ಮಾಡಿರುವುದು ರಾಷ್ಟ್ರಾದ್ಯಂತ ಅಲೆಯನ್ನು ಹೆಚ್ಚಿಸಿತು ಎಂದು ಹೇಳಿದರು.
ನಮ್ಮ ಹೆಮ್ಮೆಯ ಐಎನ್‌ಎಸ್ ವಿಕ್ರಾಂತ್(INS Vikrant) ಕೇವಲ ಯುದ್ಧನೌಕೆಯಲ್ಲ, ಬದಲಾಗಿ ಭಾರತದ ಕಠಿಣ ಪರಿಶ್ರಮ, ಪ್ರತಿಭೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಈ ವೇಳೆ ಆಪೊರೇಷನ್ ಸಿಂಧೂರ(Operation Sindur) ಮತ್ತು ಯುದ್ಧಭೂಮಿಯಲ್ಲಿ ನಿಂತ ಅನುಭವಗಳನ್ನು ಸ್ಮರಿಸುವ ಹಾಡುಗಳನ್ನು ಹಾಡುತ್ತಾ, ನಾವಿಕರ ಶಕ್ತಿ ಮತ್ತು ದೇಶಭಕ್ತಿಯ ಮನೋಭಾವವನ್ನು ಪ್ರಧಾನಿ ನೆನಪಿಸಿಕೊಂಡರು.
ಪಹಲ್ಲಾಮ್ ಭಯೋತ್ಪಾದಕ ದಾಳಿಗೆ(Phelgaum Terror Attack) ಭಾರತ ನಡೆಸಿದ ಪ್ರತಿದಾಳಿಯಲ್ಲಿ ಐಎನ್ಎಸ್ ವಿಕ್ರಾಂತ್(INS Vikrant) ಪ್ರಮುಖ ಪಾತ್ರ ವಹಿಸಿತ್ತು. ಇದು ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಕಾರ್ಯತಂತ್ರದ ಪ್ರಭಾವವನ್ನು ಪ್ರದರ್ಶಿಸಿತು. ಕಾರ್ಯಾಚರಣೆ ಸಂದರ್ಭದಲ್ಲಿ ನೌಕಾಪಡೆ(Navy), ಸೇನಾಪಡೆ(Army) ಮತ್ತು ವಾಯುಪಡೆಯ(Airforce) ನಡುವಿನ ಪರಸ್ಪರ ಸಹಕಾರವನ್ನು ಪ್ರಧಾನಿ ಒತ್ತಿ ಒತ್ತಿ ಹೇಳಿದರು. ಇದು ಬೆಳೆಯುತ್ತಿರುವ ರಕ್ಷಣಾ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ.
ಪ್ರಧಾನಿ ಮೋದಿ(PM Modi) ಅವರು 2014 ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ, ಪ್ರತಿ ವರ್ಷವೂ ಭಾರತದಾದ್ಯಂತ ಸೈನಿಕರೊಂದಿಗೆ ನಿರಂತರವಾಗಿ ದೀಪಾವಳಿ ಆಚರಣೆ(Deepavali Celebration) ಮಾಡುತ್ತಾ ಬಂದಿದ್ದಾರೆ. ಪ್ರಧಾನಿಯಾಗಿ ಮೊದಲ ದೀಪಾವಳಿಯನ್ನು ಸಿಯಾಚಿನ್ ಹಿಮನದಿಯಲ್ಲಿ ಆಚರಿಸಿದರು. ನಂತರದ ಭೇಟಿಗಳಲ್ಲಿ ಡೋಗೈ ಯುದ್ಧ ಸ್ಮಾರಕ, ಹಿಮಾಚಲ ಪ್ರದೇಶದ ಜಮ್ಮು ಮತ್ತು ಕಾಶ್ಮೀರದ ಗುರೆಜ್ ವಲಯ, ಉತ್ತರಾಖಂಡದ ಹರ್ಸಿಲ್, ಹಿಮಾಚಲ ಪ್ರದೇಶದ ಲೆಪ್ಪಾ, ಗುಜರಾತ್‌ನ ಸರ್ ಕ್ರೀಕ್ ಮತ್ತು ರಾಜಸ್ಥಾನದ ಲೋಂಗೆವಾಲಾದಲ್ಲಿ ಆಚರಿಸಿದ್ದಾರೆ. ಈ ಬಾರೀ ಕರ್ನಾಟಕ(Karnataka) ಮತ್ತು ಗೋವಾ(Goa) ಗಡಿ ಭಾಗದಲ್ಲಿ ಆಚರಿಸುವ ಮೂಲಕ ಸಂದೇಶವನ್ನು ಸಾರಿದರು.
ಇದನ್ನು ಓದಿ : ದೀಪಾವಳಿ ದಿನವೇ ದಂಪತಿ ಪ್ರಾಣ ತೆಗೆದ ವಿದ್ಯುತ್. ಹೆಸ್ಕಾಂ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಕಾಂತಾರ-1 ರಲ್ಲಿ ಮಿಂಚಿದ ಭಟ್ಕಳದ ಬೆಡಗಿ.ರಾಣಿ ಪಾತ್ರದಲ್ಲಿ ಗಮನ ಸೆಳೆದ ರಮ್ಯಾ ನಾಯ್ಕ