ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಕುಟ್ ಕುಟೆ ಮಂಡ್ಲ ಆಡುತ್ತಿದ್ದ ವೇಳೆ ಪೊಲೀಸರು ದಾಳಿ(Police Raid) ಮಾಡಿದ ಘಟನೆ ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಕೇಶವಮೂರ್ತಿಹಿತ್ತು ಗದ್ದೆಯ ಜಮೀನಿನಲ್ಲಿ ನಡೆದಿದೆ.
ನಿನ್ನೆ ರಾತ್ರಿ ಭಟ್ಕಳ ಗ್ರಾಮೀಣ ಠಾಣೆ(Bhatkal Rural Station) ಪೊಲೀಸರು ದಾಳಿ ಮಾಡಿ ಒಟ್ಟು 26 ಜನರನ್ನ ಬಂಧಿಸಿದ್ದಾರೆ. ಬಂಧಿತರೆಲ್ಲರೂ ಭಟ್ಕಳ ತಾಲೂಕಿನವರಾಗಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ಪಿಎಸೈ ರನ್ನಗೌಡ ಪಾಟೀಲ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮುಂಡಳ್ಳಿ ಹೊಸ್ಮನೆಯ ಜಗದೀಶ ಶನಿಯಾರ ನಾಯ್ಕ , ನಿತ್ಯಾನಂದ ನಾರಾಯಣ ನಾಯ್ಕ ಮತ್ತು ದೇವೇಂದ್ರ ಜಟ್ಟಪ್ಪ ನಾಯ್ಕ , ಮುಂಡಳ್ಳಿ ಸತ್ಯನಾರಾಯಣ ನಗರದ ನಿವಾಸಿಗಳಾದ ಹನುಮಂತ ಶನಿಯಾರ ನಾಯ್ಕ ಮತ್ತು ಹನುಮಂತ ಶನಿಯಾರ ನಾಯ್ಕ ಮುಂಡಳ್ಳಿ ನಿವಾಸಿಗಳಾದ ನಾಗೇಶ ದುರ್ಗಪ್ಪ ನಾಯ್ಕ , ನಾಗೇಶ ದುರ್ಗಪ್ಪ ನಾಯ್ಕ ಮತ್ತು ನಾಗರಾಜ ಲಚ್ಚಯ್ಯ ನಾಯ್ಕ ಮುಟ್ಟಳ್ಳಿ ತಲಾಂದ ನಿವಾಸಿಗಳಾದ ವಿನೋದ ಮಂಜಯ್ಯ ನಾಯ್ಕ , ವಿನೋದ ನಾಯ್ಕ ಮಾದೇವ ನಾಯ್ಕ ಮಂಗಳ ಗೊಂಡ, ಶ್ರೀನಿವಾಸ ತಿಮ್ಮಯ್ಯ ನಾಯ್ಕ ಮತ್ತು ಮಾದೇವ ನಾಗಪ್ಪ ನಾಯ್ಕ , ಶಿರಾಲಿ ಚಿತ್ರಾಪುರ ನಿವಾಸಿಗಳಾದ ಗಣಪತಿ ದುರ್ಗಪ್ಪ ಬಾಕಡ , ಮಾದೇವ ಬಾಕಡ, ಶ್ರೀಪಾದ ಬಾಕಡ ಮತ್ತು ರಾಮಚಂದ್ರ ನಾರಾಯಣ ಬಾಕಡ, ಭಟ್ಕಳ ಹಳೇ ಬಸ್ ನಿಲ್ದಾಣದ ಅಬು ಕಂಪೌಂಡ್ ನಿವಾಸಿ ಅಬ್ದುಲ್ ಗಫೂರ್ ಕೊಚ್ಚಪ್ಪ ಇಕ್ಕೇರಿ, ಮುಂಡಳ್ಳಿ ನೀರಗದ್ದೆಯ ಅನಿಲ ನಾಯ್ಕ, ಚೌತನಿ ನಿವಾಸಿಗಳಾದ ವಿನಾಯಕ ಪಾಂಡುರಂಗ ನಾಯ್ಕ ರಾಮಚಂದ್ರ ನಾಯ್ಕ ವಿಠಲ ನಾಯ್ಕ ಮಾಸ್ತಯ್ಯ ನಾಯ್ಕ ಮತ್ತು ಭರತ ರಾಮಾ ನಾಯ್ಕ ಮುಂಡಳ್ಳಿ ಚರ್ಚ್ ಕ್ರಾಸ್ ನಿವಾಸಿ ಸದಾಶಿವ ನಾಗಪ್ಪ ನಾಯ್ಕ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ : ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ದೊಣ್ಣೆಯಿಂದ ಹಲ್ಲೆ
