ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹೊನ್ನಾವರ(Honnavar) : ಸರ್ಕಾರಿ ಬಸ್ಗಳ ನಡುವೆ ಅಪಘಾತ(Accident) ಉಂಟಾಗಿ ಐವರು ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಮಹಿಮೆ ಕ್ರಾಸ್ ಬಳಿ ಸಂಭವಿಸಿದೆ.
ಒಂದು ಬಸ್ ಧರ್ಮಸ್ಥಳದಿಂದ ಹುಬ್ಬಳ್ಳಿಗೆ (Dharmasthala to Hubbli) ಹಾಗೂ ಮತ್ತೊಂದು ಬಸ್ ಬಳ್ಳಾರಿಯಿಂದ ಭಟ್ಕಳಕ್ಕೆ (Ballari to Bhatkal) ತೆರಳುತ್ತಿದ್ದಾಗ ಅಪಘಾತ ಉಂಟಾಗಿದೆ.
ಅಪಘಾತದ ಪರಿಣಾಮ ಬಸ್ ಹೆದ್ದಾರಿ ಪಕ್ಕಕ್ಕೆ ಇಳಿದಿದೆ. ಈ ವೇಳೆ ಐವರು ಪ್ರಯಾಣಿಕರಿಗೆ ಗಾಯವಾಗಿದೆ. ಗಾಯಾಳುಗಳನ್ನ ತಕ್ಷಣ 108 ವಾಹನದ ಮೂಲಕ ಹೊನ್ನಾವರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣಾ(Honnavara Police Station) ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.
ಇದನ್ನು ಓದಿ : ಭಟ್ಕಳದಲ್ಲಿ ಕುಟ್ ಕುಟೆ ಆಡುತ್ತಿದ್ದ ಸ್ಥಳದ ಮೇಲೆ ಪೊಲೀಸ್ ದಾಳಿ.