ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal): ಅಕ್ರಮವಾಗಿ ಸ್ಕೂಟರಲ್ಲಿ ದನದ ಸಾಗಾಟ ಮಾಡುತ್ತಿದ್ದ ಮತ್ತು ಮನೆಯ ಮುಂಬದಿಯಲ್ಲಿ ದನದ ಮಾಂಸ ಕಟಾವು ಮಾಡುತ್ತಿರುವ ಸಮಯದಲ್ಲಿ ಪೊಲೀಸರು ದಾಳಿ(Police raid) ಮಾಡಿದ ಘಟನೆ ಭಟ್ಕಳದಲ್ಲಿ ನಡೆದಿದೆ. ಪೊಲೀಸ್ ದಾಳಿ ವೇಳೆ  ಆರೋಪಿಗಳು ಪರಾರಿಯಾಗಿದ್ದಾರೆ.

ಮೂಸಾನಗರ ನಿವಾಸಿ ಇಸ್ಮಾಯಿಲ್ ಹವ್ಯಾ ಇಸ್ಮಾಯಿಲ್ ಮೊಹಮ್ಮದ ಹುಸೇನ್  ಹಾಗೂ ಇನ್ನಿಬ್ಬರ ಆರೋಪಿತರು ಪರಾರಿಯಾದವರು.   ಇವರು ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಎಲ್ಲಿಂದಲೋ  ದನಗಳನ್ನು ಕಳುವು ಮಾಡಿಕೊಂಡು ಬಂದು ಅವುಗಳನ್ನು ಕಟಾವು ಮಾಡಿ ಸ್ಕೂಟರ ನಂಬರ KA-47 ಕ್ಯೂ 4473 ನಲ್ಲಿ ಇಟ್ಟುಕೊಂಡು ಬದ್ರಿಯಾ ಕಾಲೋನಿಯ ಕಡೆಯಿಂದ ಮೂಸಾನಗರ 4 ನೇ ಕ್ರಾಸ್ ಮುಖಾಂತರ ತೆರಳುತ್ತಿದ್ದರು.  ಇನ್ನಿಬ್ಬರು ಆರೋಪಿತರೂ ಮೊದಲ ಆರೋಪಿತನ ವಾಸದ ಮನೆಯ ಮುಖ್ಯ ದ್ವಾರದ ಎದುರುಗಡೆ ವರಾಂಡದಲ್ಲಿ ಕಟಾವು ಮಾಡುತ್ತಿರುವಾಗ ಪೊಲೀಸ್ ದಾಳಿ(Police Raid) ನಡೆಸಲಾಗಿತ್ತು.

ಪಿಎಸ್ಐ  ತಿಮ್ಮಪ್ಪ ಎಸ್  ಅವರು ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಆರೋಪಿತರು ಪರಾರಿಯಾಗಿದ್ದಾರೆ.  ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ(Bhatkal Police Station) ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಶಿರೂರು  ಪ್ರದೇಶದಲ್ಲಿ ಮತ್ತೆ ಅಪಾಯ ಸಾಧ್ಯತೆ. ಪ್ರತಿಬಂಧಕಾಜ್ಞೆ : ಜಿಲ್ಲಾಧಿಕಾರಿ ಆದೇಶ.

ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಮತ್ತು ಜಾನುವಾರು ಸಾವು.

ಧರ್ಮಸ್ಥಳ ಮೂಲದ ಏರೋಸ್ಪೇಸ್ ಇಂಜಿನಿಯರ್ ಸಾವು. ಕೇರಳ ಮೂಲದ ಪ್ರೊಫೆಸರ್ ಆರೆಸ್ಟ್.