ಈ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಮುರ್ಡೇಶ್ವರ(Murdeshwar) : ಶೆಟ್ಟರಕೇರಿ ರಸ್ತೆಯಲ್ಲಿರುವ ಭಾರತ ಗೇಸ್ಟ್ ಹೌಸ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮುರ್ಡೇಶ್ವರ ಪೊಲೀಸರು(Murdeshwar Police) ದಾಳಿ ನಡೆಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿ, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಮುರ್ಡೇಶ್ವರ ವೃತ್ತದ ಸಿಪಿಐ  ಜಗದೀಶ ಹಂಚನಾಳ ಅವರ ನೇತೃತ್ವದಲ್ಲಿ, ಪಿಎಸ್‌ಐ  ಹಣಮಂತ ಬಿರಾದಾರ, ಪಿಎಸ್‌ಐ ಲೋಕನಾಥ ರಾಠೋಡ ಹಾಗೂ ಸಿಬ್ಬಂದಿಗಳು‌ ದಾಳಿ ನಡೆಸಿದ್ದರು. ದಾಳಿಯ ವೇಳೆ ಇಬ್ಬರು ಮಹಿಳೆಯರು(Two Womens) ಮತ್ತು ಮೂವರು ವಿಟ ಪುರುಷರು(Three Persons) ಪತ್ತೆಯಾಗಿದ್ದಾರೆ.

ಪ್ರಕರಣದಲ್ಲಿ ರೂಮ್ ಬಾಯ್(Room Boy) ಸುರೇಶ್ ನಾಗಪ್ಪ ನಾಯ್ಕ (43) ಎಂಬುವರನ್ನು ಬಂಧಿಸಲಾಗಿದೆ. ಹೆಚ್ಚಿನ ಹಣದ ಆಮಿಷ ತೋರಿಸಿ ಮಹಿಳೆಯರನ್ನು ಲಾಡ್ಜ್‌ನಲ್ಲಿ ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದರೆಂದು ಆರೋಪಿಸಲಾಗಿದೆ. ದಾಳಿಯ ವೇಳೆ ಪತ್ತೆಯಾದ ಸ್ವತ್ತುಗಳನ್ನು ಜಪ್ತಿಪಡಿಸಲಾಗಿದೆ.

ಆರೋಪಿಯ ವಿರುದ್ಧ ಕಲಂ 144(2) ಬಿ.ಎನ್.ಎಸ್-2023 ಹಾಗೂ Immoral Traffic (Prevention) Act-1956 ರ ಕಲಂ 3, 4, 5 ಅನ್ವಯ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ರಕ್ಷಿಸಲ್ಪಟ್ಟ ಮಹಿಳೆಯರನ್ನು ಭಟ್ಕಳದ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಮ್.ಎನ್. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಜಿ. ಮತ್ತು ಜಗದೀಶ ಎಂ. ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಯಿತು.

ಭಟ್ಕಳ ಉಪವಿಭಾಗದ(Bhatkal Subdivision) ಪೊಲೀಸ್ ಉಪಾಧೀಕ್ಷಕ ಗಿರೀಶ ಬಿ. ಅವರ ನೇತೃತ್ವದಲ್ಲಿ ಮುರ್ಡೇಶ್ವರ ವೃತ್ತದ(Murdeshwar Circle) ಸಿಪಿಐ ಜಗದೀಶ ಹಂಚನಾಳ ಹಾಗೂ ಪೊಲೀಸ್ಸಿಬ್ಬಂದಿಗಳಾದ  ಸಂಗಪ್ಪ, ಬಿಲಾಲಅಹಮ್ಮದ ಸಿದ್ದಾಪುರ, ಮಂಜುನಾಥ ಮಡಿವಾಳ, ಮಹೇಶ ಸಮನಳ್ಳಿ, ಸದಾಶಿವ ಕಟ್ಟಿಮನಿ, ಸಿದ್ದಪ್ಪ ಕಾಂಬಳೆ, ಹಾಗೂ ಸೀಮಾ ನಾಯ್ಕ. ನಯನಾ ನಾಯ್ಕ, ರೇಷ್ಮಾ ನಾಯ್ಕ  ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಕಾರವಾರ ಸುರಂಗ ಮಾರ್ಗದಲ್ಲಿ ಬಸ್ ನ ಎಕ್ಸೈಲ್ ಕಟ್.