ಕುಮಟಾ : ಈ ಹಿಂದೆ ಬರ್ಗಿಯ ದುರಂತದ ಘಟನೆಯನ್ನ ಈ ಟ್ಯಾಂಕರ್ ಪಲ್ಟಿ ಅಪಘಾತ ನೆನಪಿಸಿದೆ. ಕುಮಟಾದಲ್ಲಿ ಯಾಕೆ ಪದೇ ಪದೇ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗುತ್ತಿದೆ ಎಂದು ಜನ ತಲೆ ಕೆಡಿಸಿಕೊಳ್ಳುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ  ಗ್ಯಾಸ್ ಟ್ಯಾಂಕರ್ (GAS TANKER) ಒಂದು ಪಲ್ಟಿಯಾದ ಘಟನೆ ಕುಮಟಾದ ಹೊನ್ಮಾವ್ ಕ್ರಾಸ್ ಬಳಿ ಸಂಭವಿಸಿದೆ.

ಹೆದ್ದಾರಿ (HIGHWAY) ಪಕ್ಕದ ಸೇತುವೆಗೆ (BRIDGE) ಡಿಕ್ಕಿ ಹೊಡೆದು ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಬಿದ್ದಿದೆ.  ಅಂಕೋಲಾ (ANKOLA) ಕಡೆಯಿಂದ ಮಂಗಳೂರು (MANGLORE) ಕಡೆ  ಗ್ಯಾಸ್ ಟ್ಯಾಂಕರ್ ಚಲಿಸುತಿತ್ತು. ಎಚ್ ಪಿ ಗ್ಯಾಸ್ (HP GAS) ಕಂಪನಿ ಟ್ಯಾಂಕರ್ ಇದಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆದಿದೆ.

ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದು ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.