ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ನಗರದ ಐಪಿಎಂ ಗೇಟ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಾಲು ಸಹಿತ ಬಂಧಿಸಿದ(Arrest) ಘಟನೆ ನಡೆದಿದೆ.

ಬೆಳಗಾವಿಯ(Belagavi) ಮಕಾಂದಾರ ಗಲ್ಲಿಯ ನಿವಾಸಿ ವಸೀಂ ಇಸಾಕ್ ಮುಜಾವರ (27) ಮತ್ತು ಸ್ಥಳೀಯ ಸುಭಾಷ ನಗರದ ನಿವಾಸಿ ಶಾನವಾಜ್ ಅಲಿಯಾಸ್ ಅಯಾನ್ ಇಮ್ತಿಯಾಜ್ ಶೇಖ (22) ಬಂಧಿತರು. ಇವರಿಬ್ಬರು ಸೇರಿ ಗಾಂಜಾ ಮಾದಕ ಪದಾರ್ಥ ಮಾರಾಟ ಮಾಡುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ನಗರ ಠಾಣೆಯ  ಪಿಎಸ್ಐಗಳಾದ ಅಮೀನ್ ಅತ್ತಾರ ಹಾಗೂ ಕಿರಣ್ ಪಾಟೀಲ್ ಅವರು ಸಿಬ್ಬಂದಿಗಳ ಜೊತೆ ದಾಳಿ ನಡೆಸಿ, ಮಾಲು ಸಹಿತ ಇವರಿಬ್ಬರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತರಿಂದ  60 ಸಾವಿರ ರೂ ಅಂದಾಜು ಮೌಲ್ಯದ 1 ಕೆಜಿ 198 ಗ್ರಾಂ ತೂಕದ ಗಾಂಜಾ ಮಾದಕ ಪದಾರ್ಥ ಹಾಗೂ ನಗದು ರೂ.550/- ಮತ್ತು ಮಾರಾಟಕ್ಕೆ ಬಳಸುತ್ತಿದ್ದ ಪ್ಲಾಸ್ಟಿಕ್ ಕವರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ.ಜಿ ಮತ್ತು ಜಗದೀಶ್.ಎಂ  ಹಾಗೂ ದಾಂಡೇಲಿ ಉಪ ವಿಭಾಗದ ಡಿವೈಎಸ್ಪಿ ಶಿವಾನಂದ ಮದರಕಂಡಿ ಮತ್ತು ಸಿಪಿಐ ಜೈಪಾಲ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್ಐಯವರಾದ ಅಮೀನ್ ಅತ್ತಾರ ಮತ್ತು ಕಿರಣ್ ಪಾಟೀಲ್ ಅವರ ನೇತೃತ್ವದಲ್ಲಿ  ಕಾರ್ಯಾಚರಣೆ ನಡೆಸಲಾಗಿತ್ತು. ಸಿಬ್ಬಂದಿಗಳಾದ ರಮೇಶ ನಿಂಬರಗಿ, ಇಮ್ರಾನ್ ಕಂಬಾರಗಣವಿ, ಕೃಷ್ಣ ಬೆಳ್ಳುವರಿ, ಮೆಹಬೂಬ್ ಕಿಲ್ಲೇದಾರ, ಶಾಸಪ್ಪ, ಪ್ರಸನ್ನ ಕುಮಾರ್, ಬಸವರಾಜ ತೇಲಸಂಗ ಮತ್ತು ಚಾಲಕ ಮಹಾಂತೇಶ ಜಾಮಗೌಡ ಅವರು ಭಾಗವಹಿಸಿದ್ದರು.

ಇದನ್ನು ಓದಿ : ಹಾಡುವಳ್ಳಿಯ ನಾಲ್ವರ ಕೊ ಪ್ರಕರಣ. ತಂದೆಗೆ ಜೀವಾವಧಿ. ಮಗನಿಗೆ ಮರಣ ದಂಡನೆ ಶಿಕ್ಷೆ.

ಸಿಡಿಲು ಬಡಿದು ಮನೆಗೆ ಹಾನಿ. ಸ್ವಲ್ಪದರಲ್ಲಿ ಪಾರಾದ ಮನೆಯವರು.

ಕಾರವಾರದಲ್ಲಿ ವೈಮಾನಿಕ ದಾಳಿ ಎಲ್ಲೆಡೆ ಅಲರ್ಟ್. ಸಾವಿರಾರು ಮಂದಿಯ ರಕ್ಷಣೆ.