ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ರಾಷ್ಟ್ರಪತಿ ದ್ರೌಪದಿ ಮುರ್ಮು(President Droupadi murmu) ಅವರು  ಡಿಸೆಂಬರ್ 28 ರಂದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನೇವಲ್ ಬೇಸ್(Naval Base) ಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ರಾಷ್ಟ್ರಪತಿಗಳ  ಆಗಮನ ಮತ್ತು  ನಿರ್ಗಮನದವರೆಗೆ ಯಾವುದೇ ರೀತಿಯಲ್ಲೂ ಅಡೆತಡೆ ಆಗಬಾರದು. ಅವರ ಸುರಕ್ಷತೆ ಕೈಗೊಳ್ಳಬೇಕಾಗಿದ್ದರಿಂದ ಡಿಸೆಂಬರ್ 28ರ ಮಧ್ಯಾಹ್ನ 3.30 ಗಂಟೆಯವರೆಗೆ ಹಾರವಾಡದಿಂದ ಮಾಜಾಳಿಯವರೆಗಿನ(Harwad to Majali) ಸಮುದ್ರ ತೀರದಲ್ಲಿ ಮೀನುಗಾರಿಕೆಯನ್ನು ನಿರ್ಬಂಧಿಸಲಾಗಿದೆ.

ಆದ್ದರಿಂದ ಎಲ್ಲಾ ಮೀನುಗಾರರು(Fishermen) ಹಾಗೂ ದೋಣಿ ಮಾಲೀಕರು(Boat Owner) ಸದ್ರಿ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮೀನುಗಾರಿಕೆ ಇಲಾಖೆಯ(fishries Department) ಜಂಟಿ ನಿರ್ದೇಶಕರು(Joint Director) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : ಉಸಿರು ಕಳೆದುಕೊಂಡ ಮಗಳ ಗುರುತಿಸಲಾಗದೆ ವಾಪಸ್ ಆದ ತಂದೆ.

ಬಟ್ಟೆ ಬದಲಿಸುವಾಗ ನರ್ಸ್ ಗಳ ಖಾಸಗಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಆಸಾಮಿ. ಪೊಲೀಸರಿಂದ ಬಂಧನ