ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪಂಜಾಬ್(Panjab) : ಏರೋಸ್ಪೇಸ್ ಇಂಜಿನಿಯರ್ ಆಗಿದ್ದ ಧರ್ಮಸ್ಥಳ ಮೂಲದ ಆಕಾಂಕ್ಷ ಎಸ್ ನಾಯರ್(22) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರೊಫೆಸರ್ ಕೇರಳ ಮೂಲದ(Keral Native) ಬಿಜಿಲ್ ಸಿ ಮ್ಯಾಥ್ಯೂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಧರ್ಮಸ್ಥಳದ (Dharmasthala) ಬೊಳಿಯರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂ ದೇವಿ ದಂಪತಿಗಳ ಎರಡನೇ ಪುತ್ರಿಯಾಗಿದ್ದ ಆಕಾಂಕ್ಷ ಪಂಜಾಬ್ ನಲ್ಲಿ(Panjab) ಮೇ 17 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕಾಂಕ್ಷೆಗೆ ತಾನು ಓದುತ್ತಿದ್ದ ಯೂನಿವರ್ಸಿಟಿ ಪ್ರೊಫೆಸರ್(University Professor) ಜೊತೆ ಪ್ರೇಮಾಂಕುರವಾಗಿತ್ತು(Love). ಎರಡು ಮಕ್ಕಳ ತಂದೆ ಪ್ರೊಫೆಸರ್ ಬಿಜಿಲ್ ಮ್ಯಾಥ್ಯೂ ಅವರೊಂದಿಗೆ ಪ್ರೀತಿ ಉಂಟಾಗಿತ್ತು ಎನ್ನಲಾಗಿದೆ. ಸಂಬಂಧಪಟ್ಟಂತೆ ಮದುವೆಯಾಗುವಂತೆ ಮ್ಯಾಥ್ಯೂಗೆ ಒತ್ತಾಯಿಸಿದ್ದಾಳೆ. ಬಳಿಕ ಕಾಲೇಜಿನಲ್ಲೂ ಜಗಳವಾಡಿ ನಂತರ ಕಾಲೇಜಿನ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಆತ್ಮಹತ್ಯೆಗೆ ಪ್ರೇರಣೆ ಹಿನ್ನೆಲೆ ಮ್ಯಾಥ್ಯೂ ವಿರುದ್ದ ಪಂಜಾಬ್‌ನ ಜಲಂಧರ್ ಪೊಲೀಸ್ ಠಾಣೆಯಲ್ಲಿ (Panjab Jalandhar Police Station) ಪ್ರಕರಣ ದಾಖಲಾಗಿ ಪೊಲೀಸರು ಆತನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಆಕಾಂಕ್ಷ ಮೃತದೇಹ ಧರ್ಮಸ್ಥಳ(Dharmasthala) ಬೊಳಿಯೂರು ಗೆ ನಿನ್ನೆ ಆಗಮಿಸಿದ್ದರಿಂದ ಅಂತ್ಯಸಂಸ್ಕಾರ ನಡೆಸಲಾಗಿದೆ. ಆದರೆ ಕುಟುಂಬದವರಿಗೆ ಸಾವಿನ ಬಗ್ಗೆ ಸಂಶಯ ಇದ್ದಿದರಿಂದ ಪಾರ್ಥೀವ ಶರೀರವನ್ನು ಸುಡದೆ ಮಣ್ಣು ಮಾಡಿದ್ದಾರೆ.
ತನಿಖೆಯ ಕಾರಣದಿಂದ ಸುಡದೇ ಬಾಕ್ಸ್ ನಲ್ಲೇ ಶರೀರವನ್ನಿಟ್ಟು ಮಣ್ಣು ಮಾಡಿ ಅಂತಿಮ ಕ್ರಿಯೆ ನಡೆಸಲಾಗಿದೆ. ಮಲಯಾಳಿ ಹಿಂದೂ(Malayali Hindu) ಪದ್ಧತಿಯ ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಗಿದೆ. ಆಕಾಂಕ್ಷ ಸಾವಿಗೆ ನ್ಯಾಯ ಕೊಡಿಸಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.
ಇದನ್ನು ಓದಿ : ಎರಡು ಮಕ್ಕಳ ತಂದೆಯೊಂದಿಗೆ ಪ್ರೇಮಾಂಕುರ. ಜೀವ ಕಳೆದುಕೊಂಡ ಧರ್ಮಸ್ಥಳ ಮೂಲದ ಏರೋಸ್ಪೆಸ್ ಎಂಜಿನಿಯರ್.