ಭಟ್ಕಳ/ಕಾರವಾರ :ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವ ಒತ್ತಾಯಿಸಿ ಭಟ್ಕಳ (BHATKAL) ಮತ್ತು ಕಾರವಾರದಲ್ಲಿ(KARWAR) ಪ್ರತಿಭಟನೆ ನಡೆಸಲಾಯಿತು.
ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಕಾರ್ಯಕಾರಣಿ ಸಭೆಯ ನಿರ್ಣಯದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಲೇಖನಿ ಕೆಳಗಿಟ್ಟು, ಮೊಬೈಲ್ ಆಪ್ ಮತ್ತು ವೆಬ್ ಕಾರ್ಯ ಸ್ಥಗಿತಗೊಳಿಸಿ ಕಪ್ಪುಪಟ್ಟಿ ಧರಿಸಿ ಭಟ್ಕಳ ತಾಲೂಕಾ ಘಟಕದಿಂದ ಇಲ್ಲಿನ ಆಟೋ ರಿಕ್ಷಾ ಗಣೇಶೋತ್ಸವ ಮೈದಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ಭಟ್ಕಳ ಘಟಕದ ಗೌರವಾಧ್ಯಕ್ಷ ಕೆ ಶಂಭು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ನಮ್ಮ ಗ್ರಾಮ ಆಡಳಿತ ಅಧಿಕಾರಿಗಳು ಅನುಭವಿಸುತ್ತಿರುವ ಕೆಲಸದ ಒತ್ತಡದವನ್ನು ಹೆಚ್ಚು ಹೆಚ್ಚು ನೀಡುತ್ತಿದ್ದಾರೆ. ಅದನ್ನು ಕಡಿಮೆಗೊಳಿಸಲು ನಾವು ಇಂದು ರಾಜ್ಯಾದ್ಯಂತ ಶಾಂತಿಯುತ ಮುಷ್ಕರ ನಡೆಸುತ್ತಿದ್ದೇವೆ ಎಂದರು.
ಭಟ್ಕಳ ಸಂಘದ ಸದಸ್ಯ ಚಾನ್ ಬಾಷಾ ಮಾತನಾಡಿ ನಮ್ಮ ರಾಜ್ಯ ಸಂಘದಿಂದ ಈಗಾಗಲೇ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಂದಾಯ ಇಲಾಖೆ ಇವರೊಂದಿಗೆ ನಮ್ಮ ಬೇಡಿಕೆ ಬಗ್ಗೆ ಚರ್ಚೆ ಮಾಡಲಾಗಿದ್ದು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ದೊರೆತಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳು ಕಂದಾಯ ಇಲಾಖೆಯಲ್ಲಿ ತಳಮಟ್ಟದ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಕಷ್ಟು ಸಮಸ್ಯೆಗಳಿದ್ದು ಕೆಲವು ನೌಕರರು ಕೆಲಸದ ಒತ್ತಡದಿಂದ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಕಳೆದ 5-6 ವರ್ಷಗಳಿಂದ ಭಟ್ಕಳ ತಾಲೂಕಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹೀಗೆ ರಾಜ್ಯಾದ್ಯಂತ ಅನೇಕ ನೌಕರರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಕೆಲಸದ ಒತ್ತಡವಾಗಿದೆ. ಮೂಲತಃ ನಮ್ಮದು ತಾಂತ್ರಿಕ ಹುದ್ದೆಯಲ್ಲ. ಆದರೆ ಒತ್ತಾಯ ಪೂರ್ವಕವಾಗಿ ತಾಂತ್ರಿಕ ಕೆಲಸವನ್ನು ಮೊಬೈಲ್ ಆಫ್ ಮೂಲಕ ಮಾಡುವಂತ ಒತ್ತಡವನ್ನು ನಿರಂತರವಾಗಿ ಹೇರಲಾಗುತ್ತಿದೆ. ಕನಿಷ್ಠ 21 ಮೊಬೈಲ್ ಆಫ್ ಗಳ ಮೂಲಕ ನಮ್ಮ ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಸಂಘದಿಂದ ಯಾವ ರೀತಿ ನಿರ್ದೇಶನ ಬರುತ್ತದೆಯೋ ಅದರ ಆಧಾರದ ಮೇಲೆ ನಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಸ್ರಷ್ಟಿಯಾಗಿದೆ. ಗ್ರಾಮ ಲೆಕ್ಕಿಗರಿಗೆ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟು ಇದೆ ಎಂದರು
ನಂತರ ಮುಷ್ಕರ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಮುಷ್ಕರ ನಿರತರಿಂದ ಮನವಿ ಸ್ವೀಕರಿಸಿ ಮುಷ್ಕರಕ್ಕೆ ಅನುಮತಿ ಇಲ್ಲದೆ ಇರುವುದರಿಂದ ಮುಷ್ಕರ ಕೈ ಬಿಡುವಂತೆ ಮನವಿ ಮಾಡಿದರು ಬತಹಶೀಲ್ದಾರಗೆ ಮಾತಿಗೆ ಮುಷ್ಕರ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ಲತಾ ನಾಯ್ಕ, ಉಪಾಧ್ಯಕ್ಷೆ ಹೇಮಾ ನಾಯ್ಕ, ಕಾರ್ಯದರ್ಶಿ ಚರಣ ಗೌಡ, ಸಂಘಟನೆ ಕಾರ್ಯದರ್ಶಿ ಗಣೇಶ ಕುಲಾಲ್
ಸದಸ್ಯರಾಧ  ವಿನುತ, ಶ್ರುತಿ ದೇವಾಡಿಗ,ಶಬಾನ ಬಾನು,
ದೀಕ್ಷಿತ, ದಿಪ್ತಿ, ದಿವ್ಯಾ, ವೀಣಾ, ಐಶ್ವರ್ಯ ಇದ್ದರು.
ಕಾರವಾರದಲ್ಲೂ ಸಹ ಬೇಡಿಕೆ ಈಡೇರಿಸುವಂತೆ ಪ್ರತಿಭಟಿಸಲಾಯಿತು. ತಹಸೀಲ್ದಾರ್ ನಿಶ್ಚಲ್ ನರೋನಾ ಅವರಿಗೆ ಮನವಿ ನೀಡಲಾಯಿತು.
ಇದನ್ನು ಓದಿ : 
ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಸತೀಶ್ ಸೈಲ್ ಗೆ ಕೇರಳ ಸಿಎಂ ಧನ್ಯವಾದ 
	
						
							
			
			
			
			
