ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಅಂಕೋಲಾ(Ankola): ತಾಲೂಕಿನ ಕೇಣಿಯಲ್ಲಿ ಜಾರಿಯಾಗುವ ಗ್ರೀನ್ ಫೀಲ್ಡ್ ಬಂದರು ಯೋಜನೆಗೆ ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾಗಿದೆ

ಸೋಮವಾರ ಕೇಣಿ ಸುತ್ತಮುತ್ತಲು ನಿಷೇದಾಜ್ಞೆ ಜಾರಿಗೊಳಿಸಿದ್ದರಿಂದ ಹೆಚ್ಚಿನ ಪೊಲೀಸರನ್ನ ನಿಯೋಜಿಸಲಾಗಿತ್ತು. ಆದರೂ ಸಹ ಸ್ಥಳೀಯ ಮೀನುಗಾರರು ಕಡಲತೀರದಲ್ಲಿ ಸೇರಿ ಪ್ರತಿಭಟಿಸಿದರು. ಸಮುದ್ರಕ್ಕೆ ಜಿಗಿದು ಆಕ್ರೋಶ ವ್ಯಕ್ತಪಡಿಸಿದರು.

ಭೂವಿಜ್ಞಾನ ಸಮೀಕ್ಷೆ ನಡೆಸುವ ಹಿನ್ನಲೆಯಲ್ಲಿ ನಾಳೆ ಸಂಜೆ 6ಗಂಟೆವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. 4119ಕೋಟಿ ರೂ ವೆಚ್ಚದಲ್ಲಿ Jsw ಕಂಪನಿಯಿಂದ ಬಂದರು ಯೋಜನೆ ಮಾಡಲಾಗುತ್ತಿದೆ.

ಬಂದರು ಯೋಜನೆ ಜಾರಿಯದಲ್ಲಿ ನಮ್ಮ ಮೀನುಗಾರಿಕೆಗೆ ತೊದರೆಯಾಗಲಿದೆ. ಹೀಗಾಗಿ ಯೋಜನೆ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಮೀನುಗಾರರ ಪ್ರತಿಭಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾ ಸಂದರ್ಭದಲ್ಲಿ ಮೂವರು ಮಹಿಳೆಯರು ಅಸ್ವಸ್ಥರಾಗಿದ್ದಾರೆ ಅಂಕೋಲಾದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕಾರವಾರಕ್ಕೆ ರವಾನಿಸಲಾಗಿದೆ

ಇದನ್ನು ಓದಿ : . ಪಾಕಿಸ್ತಾನ ಬಗ್ಗು ಬಡಿದ ಭಾರತ. ದುಬೈನಲ್ಲಿ ರೋಚಕ ಪಂದ್ಯ.

ಗ್ರಾಮದಲ್ಲಿ ನಿಷೇಧಾಜ್ಞೆ