ಮುಂಡಗೋಡು(ಉತ್ತರಕನ್ನಡ)(Mundgod) : ದೀಪಾವಳಿಯ (Deepavali)ಸಂದರ್ಭದಲ್ಲಿ ನಡೆಸಲಾಗುವ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕನೋರ್ವ ತನ್ನ ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ಚಿಗಳ್ಳಿಯಲ್ಲಿ(Chigalli) ನಡೆದಿದೆ.
ಪರಮೇಶ್ ಸಿದ್ದಪ್ಪ ಹರಿಜನ್ ಹೋರಿ ತಿವಿತದಿಂದ ಸಾವನ್ನಪ್ಪಿದ ಯುವಕನಾಗಿದ್ದಾನೆ. ಮುಂಡಗೋಡಿನ (mundgodu) ಚಿಗಳ್ಳಿಯ ಕಲ್ಮೇಶ್ವರ ಮಠದ (Chigalli kalmeshwar math) ಬಳಿ ದೀಪಾವಳಿಯ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಇದನ್ನು ನೋಡಲು ಪರಮೇಶ ಹೋಗಿದ್ದ. ಸ್ಪರ್ಧೆಗೆ ಬಂದ ಹೋರಿಯೊಂದು ತಿವಿದ ಪರಿಣಾಮವಾಗಿ ತೀವ್ರ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದಾನೆ.
ಘಟನೆ ಸಂಬಂಧ ಮುಂಡಗೋಡು ಪೊಲೀಸ್ ಠಾಣೆಯಲ್ಲಿ(Mundgod Police Station) ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಖ್ಯಾತ ಸಿನೆಮಾ ನಿರ್ದೇಶಕ ಆತ್ಮಹತ್ಯೆ
ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದ ಶಾಸಕ
ಮೊಬೈಲ್ ಹಿಡಿದು ಅಡುಗೆ ಮಾಡುವವರೇ ಹುಷಾರ್
ವಕ್ಫ ಗಲಾಟೆ ಉಲ್ಬಣ ಸಾಧ್ಯತೆ. ಸಿಎಂ ಸಭೆ