ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೆಂಗಳೂರು/ಉಡುಪಿ(Banglore/Udupi) : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನಗಳ ಕಾಲ ಮಳೆ(Rain) ಮುಂದುವರಿಯುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳು(Coastal District) ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ನಾಳೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡು ಭಾಗದಲ್ಲಿ ಒಣ ಹವೆ ಮುಂದುವರಿಯಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ(Bangalore) ಸ್ವಲ್ಪ ಮಳೆಯಾಗಬಹುದೆಂದು ಹವಾಮಾನ ಇಲಾಖೆ(Metrology Department) ತಿಳಿಸಿದೆ.
ಉಡುಪಿ ಜಿಲ್ಲೆಯಾದ್ಯಂತ(Udupi District) ಮಳೆ ಸುರಿದಿದ್ದು, ಕಳೆದ ಅರ್ಧ ಗಂಟೆಯಿಂದ ನಿರಂತರ ವರ್ಷಧಾರೆಯಾಗಿದೆ. ಕಾರ್ಕಳ(Karkal), ಉಡುಪಿ(Udupi) ಮತ್ತು ಹೆಬ್ರಿ(Hebri) ಪ್ರದೇಶಗಳಲ್ಲಿ ಗುಡುಗು–ಮಿಂಚು(Thunderstorms) ಸಹಿತ ಜೋರಾಗಿ ಮಳೆ ಸುರಿಯುತ್ತಿದೆ.
ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ ಪ್ರದೇಶದಲ್ಲಿ ವಾತಾವರಣ ಅಸ್ಥಿರಗೊಂಡಿದ್ದು, ಜಿಲ್ಲೆಯಾದ್ಯಂತ ಮೋಡದಿಂದ ಆವೃತ ವಾತಾವರಣ ಮುಂದುವರೆದಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಒಂದೆರಡು ದಿನ ಮಳೆಯ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಶಿವಮೊಗ್ಗ, ಚಿತ್ರದುರ್ಗ ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ(Uttarakannada) ಮತ್ತು ದಕ್ಷಿಣ ಕನ್ನಡ(Dakshinakannada) ಜಿಲ್ಲೆಗಳಲ್ಲಿಯೂ ವರುಣ ಆರ್ಭಟಿಸುವ ಸಾಧ್ಯತೆಯಿದೆ.
ಇದನ್ನು ಓದಿ : ಡಿಸೆಂಬರ್ 7ಕ್ಕೆ ಉಡುಪಿಗೆ ನಟ ಪವನ್ ಕಲ್ಯಾಣ್. ಗೀತೋತ್ಸವದಲ್ಲಿ ಬಾಗಿಯಾಗುವ ಆಂದ್ರ ಉಪಮುಖ್ಯಮಂತ್ರಿ.
ಮನೆಯಲ್ಲಿ 60 ಕೆಜಿ ಶ್ರೀಗಂಧ. ಆರೋಪಿ ಕಬ್ಬಿನ ಗದ್ದೆಯಲ್ಲಿ ಪರಾರಿ.
ಜಾಗತಿಕ ಹವಾ ಸೃಷ್ಟಿಸಿದ ’45’ ಚಿತ್ರದ ‘AFRO ಟಪಾಂಗ್’ಹಾಡು. ಭಾರತದಲ್ಲಿ ಟಾಪ್ ಟ್ರೆಂಡಿಂಗ್ ! ಸದ್ಯದಲ್ಲೇ ಟ್ರೇಲರ್.
