ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) :   ಮುಂಬೈನ ಫ್ಲಾಟ್‌ನಲ್ಲಿ ಏರ್ ಇಂಡಿಯಾ ಪೈಲಟ್‌(Air India Pilot) ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಯ್‌ಫ್ರೆಂಡ್‌ ಆಕೆಗೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಆರೆಸ್ಟ್ ಮಾಡಲಾಗಿದೆ.

ಸೃಷ್ಟಿ ತುಲಿ ಎಂಬ  ಪೈಲೆಟ್ ಶವವನ್ನು ಅಂಧೇರಿಯ(Andheria) ಮರೋಲ್ ಪ್ರದೇಶದ ಕನಕಿಯಾ ರೈನ್‌ಫಾರೆಸ್ಟ್ ಕಟ್ಟಡದಲ್ಲಿ (Rainforest Building) ಬಾಡಿಗೆಗೆ ಪಡೆದಿದ್ದ ಫ್ಲಾಟ್‌ನಲ್ಲಿ ಪತ್ತೆ ಮಾಡಲಾಗಿದೆ. ಸೋಮವಾರದಂದು ಆಕೆ ಡೇಟಾ ಕೇಬಲ್‌ನಿಂದ ನೇಣಿಗೆ ಶರಣಾಗಿದ್ದಾಳೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ .

ಸೃಷ್ಟಿಯ ಬಾಯ್‌ಫ್ರೆಂಡ್ ಆದಿತ್ಯ ಪಂಡಿತ್ (27) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಪವಾಯಿ ಪೊಲೀಸ್ ಠಾಣೆಯ ಪೊಲೀಸರು  ಆದಿತ್ಯನ ನವೆಂಬರ್ 29 ರವರೆಗೆ ಪೊಲೀಸ್‌ ಕಸ್ಟಡಿಗೆ ಪಡೆದಿದ್ದಾರೆ.

ಆದಿತ್ಯ ಪಂಡಿತ್ ಕಿರುಕುಳ ಮತ್ತು ನಿಂದನೆ ಮಾಡಿದ್ದಾರೆ ಎಂದು ಸೃಷ್ಟಿ ಅವರ ಚಿಕ್ಕಪ್ಪ ಆರೋಪಿಸಿದ್ದಾರೆ. ಆದಿತ್ಯ ಪಂಡಿತ್ ನಮ್ಮ ಮಗಳಿಗೆ ಮಾಂಸಾಹಾರ ತಿನ್ನುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ತೆಯ ಸಂಬಂಧಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶ ಮೂಲದ(Uttarapradesh native) ಸೃಷ್ಟಿ ತುಲಿ ಕಳೆದ ವರ್ಷ ಜೂನ್‌ನಿಂದ ಮುಂಬೈನಲ್ಲಿ(Mumbai) ನೆಲೆಸಿದ್ದರು. ಆಕೆ ಮತ್ತು ಆದಿತ್ಯ ಪಂಡಿತ್ ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಣಿಜ್ಯ ಪೈಲಟ್ ಕೋರ್ಸ್(Commercial pilot Course) ಓದುತ್ತಿದ್ದಾಗ ಭೇಟಿಯಾದರು. ನಂತರ ಸಂಬಂಧವನ್ನು ಹೊಂದಿದ್ದರು. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ.

ಇದನ್ನು ಓದಿ : ರೈತ ಸಂಘ, ಹಸಿರು ಸೇನೆ ಪ್ರತಿಭಟನೆ

ಡಿಸೆಂಬರ್ 2ರಿಂದ ಕುಮಟಾ – ಶಿರಸಿ ರಸ್ತೆ ಬದಲು

ನರ್ಸ್ ವೇಷದಲ್ಲಿ ಬಂದು ಶಿಶು ಕಳ್ಳತನ