ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬ್ರೆಜಿಲ್(Brazil) : ಮಗಳ ಮೇಲೆ ಅತ್ಯಾಚಾರಕ್ಕೆ ಮುಂದಾದ ಗೆಳೆಯನನ್ನ ಭೀಕರವಾಗಿ ಹತ್ಯೆ ಮಾಡಿದ ತಾಯಿಯೋರ್ವಳು ನಿರಪರಾಧಿ(_Innocent) ಎಂದು ನ್ಯಾಯಾಲಯ ಘೋಷಿಸಿದೆ(Court Declared).
ಬ್ರೆಜಿಲ್ ನ (Brizil) ಬೆಲೊ ಹೊರಿಜಾಂಟೆಯಲ್ಲಿ ನಡೆದ ಘಟನೆ ಮತ್ತು ಈಗ ಬಂದಿರುವ ತೀರ್ಪು ಜಾಗತಿಕ ಮಟ್ಟದಲ್ಲಿ ವೈರಲ್(World wide Viral) ಆಗುತ್ತಿದೆ.
ತಾಯಿ ಮಾಡಿದ್ದು ತಪ್ಪು ತಪ್ಪು ಎನ್ನುವವರಿಗೆ ಈ ತೀರ್ಪು(Decesion) ಹೊಸ ಚರ್ಚೆ ಹುಟ್ಟುಹಾಕಿದೆ. ತನ್ನ 11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಕಾಮುಕನನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದ ತಾಯಿ ಈಗ ಹೀರೋ ಆಗಿದ್ದಾಳೆ.
2025ರ ಮಾರ್ಚ್ನಲ್ಲಿ ಎರಿಕಾ ಪೆರೇರಾ ಎಂಬ ಮಹಿಳೆಯ ಮನೆಯ ಕೋಣೆಯೊಳಗೆ ತನ್ನ ಮಗಳ ಕಿರುಚಾಟದ ಶಬ್ಧ ಕೇಳಿ ಬಂದಿತ್ತು. ಓಡಿ ಹೋಗಿ ನೋಡಿದರೆ ಕಂಡಿದ್ದು ನರಕದ ದೃಶ್ಯ. ಆಕೆಯ ಗೆಳೆಯ ಎವರ್ಟನ್ ಅಮರೊ ಎಂಬಾತ ಆಕೆಯ 11 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಲು ಯತ್ನಿಸುತ್ತಿದ್ದ. ಆಗ ಆ ತಾಯಿ ಆ ಕ್ಷಣವೇ ರಣಚಂಡಿಯಾಗಿದ್ದಾಳೆ.
ಕಾಮುಕ ಗೆಳೆಯನಿಗೆ ಅಮಲು ಪದಾರ್ಥ ಬೆರೆಸಿದ ಜ್ಯೂಸ್ ನೀಡಿ, ಆತ ಪ್ರಜ್ಞೆ ತಪ್ಪುತ್ತಿದ್ದಂತೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾಳೆ. ಅಷ್ಟಕ್ಕೇ ನಿಲ್ಲದ ಆಕೆ, ಕಾಮುಕನ ಜನನಾಂಗವನ್ನು ಕತ್ತರಿಸಿ ಹಾಕಿ, ಆತನ ಮೃತದೇಹವನ್ನು ಸುಟ್ಟು ಹಾಕಿದ್ದಳು. ಕೃತ್ಯದ ಬಳಿಕ ತಾನೇ ಸ್ವತಃ ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡು ಶರಣಾಗಿದ್ದಳು.
ನ್ಯಾಯಾಲಯದಲ್ಲಿ ವಿಚಾರಣೆ(Court enquiry) ನಡೆದು ಅಚ್ಚರಿಯ ತೀರ್ಪು ಬಂದಿದೆ. ಈ ಕೊಲೆ ‘ಪೂರ್ವಯೋಜಿತ’ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಆದರೆ, ಮಾರ್ಚ್ 24, 2026 ರಂದು ತೀರ್ಪು ನೀಡಿದ ನ್ಯಾಯಾಧೀಶರು, “ಆಕೆ ಮಾಡಿದ್ದು ತನ್ನ ಮಗಳ ಕಾನೂನುಬದ್ಧ ರಕ್ಷಣೆಗಾಗಿ” ಎಂಬ ವಾದವನ್ನು ಪುರಸ್ಕರಿಸಿದ್ದಾರೆ. ಎಲ್ಲಾ ಆರೋಪಗಳಿಂದ ಎರಿಕಾಳನ್ನು ಮುಕ್ತಗೊಳಿಸಿರುವ ನ್ಯಾಯಾಲಯ, ಆಕೆಯನ್ನು ಬಿಡುಗಡೆ ಮಾಡಿದೆ.
ಸೋಷಿಯಲ್ ಮೀಡಿಯಾದಲ್ಲಿ ‘ಹೀರೋ’ ಆದ ತಾಯಿ!: ಜಾಗತಿಕ ಮಟ್ಟದಲ್ಲಿ ಈ ಸುದ್ದಿ ವೈರಲ್(News Viral) ಆಗುತ್ತಿದ್ದಂತೆ ನೆಟ್ಟಿಗರು ಎರಿಕಾ ಪರ ಬ್ಯಾಟ್ ಬೀಸುತ್ತಿದ್ದಾರೆ. ”ಆಕೆ ಕೇವಲ ನಿರ್ದೋಷಿಯಲ್ಲ, ಆಕೆ ಒಬ್ಬ ರಿಯಲ್ ಹೀರೋ!” ಎಂದು ಒಬ್ಬರು ಕಾಮೆಂಟ್ ಮಾಡುತ್ತಿದ್ದರೇ, ಮತ್ತೊಂದೆಡೆಯಲ್ಲಿ “ಇದು ಅಪರಾಧವಲ್ಲ, ಇದು ತಾಯಿ ನೀಡಿದ ನೈಜ ನ್ಯಾಯ(Real Justice)” ಎಂದು ಸಾವಿರಾರು ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಭಾರತದಂತಹ ದೇಶಗಳಲ್ಲಿ ಅತ್ಯಾಚಾರ ಪ್ರಕರಣಗಳ ವಿಚಾರಣೆ ವರ್ಷಗಟ್ಟಲೆ ನಡೆಯುತ್ತಿರುವಾಗ, ಬ್ರೆಜಿಲ್ ನ್ಯಾಯಾಲಯದ(Brazil Court) ಈ ಕ್ಷಿಪ್ರ ಮತ್ತು ಕಠಿಣ ಸಂದೇಶ ನೀಡುವ ತೀರ್ಪು ಈಗ ಎಲ್ಲೆಡೆ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇದನ್ನು ಓದಿ :ಒಬ್ಬಾಕೆಯನ್ನ ಮದುವೆಯಾಗಲು ಎರಡು ದಿಬ್ಬಣ ಬಂತು! ಮದುವೆ ಮನೆಯಲ್ಲಿ ಹೈಡ್ರಾಮಾ.
ಅಂತ್ಯಸಂಸ್ಕಾರ ಮುಗಿಸಿ ವಾಪಸ್ಸಾಗುತ್ತಿದ್ದವರ ಕಾರಿಗೆ ಡಂಪರ್ ಢಿಕ್ಕಿ. ಓರ್ವ ಮೃತ. ಲಾರಿ ಚಾಲಕ ಎಸ್ಕೇಪ್.
