ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಉತ್ತರಪ್ರದೇಶ(Uttarpradesh) : ಈಗ ಎಲ್ಲೆಡೆ ಮದುವೆಯ ಭರಾಟೆ. ಮದುವೆ(Marriage) ಮನೆಯವರ ನಡುವೆ, ಸಂಬಂಧಿಕರ ಮಧ್ಯೆ ಬರೀ ಮದುವೆಯ ಮಾತೇ ಜೋರಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಜಗಳಗಳು ಸಾಮಾನ್ಯವಾಗಿದೆ. ಆದರೆ ಒಂದೇ ವಧುವನ್ನ ವರಿಸಲು ಇಬ್ಬರು ವರರು ಮದುವೆ ಮಂಟಪಕ್ಕೆ ದಿಬ್ಬಣದೊಂದಿಗೆ ಆಗಮಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಸಿನಿಮಾ ಸ್ಟೈಲ್‌ನ ಈ ಮದುವೆಯ ಹೈಡ್ರಾಮಾ(Marriage Hi drama) ಪರಿಸ್ಥಿತಿ ಕೈಮೀರಿಸುವಂತೆ ಮಾಡಿದೆ. ಪೊಲೀಸರ ಮಧ್ಯಪ್ರವೇಶದಿಂದ  ಮದುವೆ ಸುಖಾಂತ್ಯವಾಗಿ ನಡೆದಿದೆ. ಅಮೋಹಾದ(Amoha) ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂಭಲ್ ಜಿಲ್ಲೆಯ ವರನ ಸ್ವಾಗತಕ್ಕೆ ವಧುವಿನ ಕುಟುಂಬ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಸರಿಯಾದ ಸಮಯಕ್ಕೆ ವರನ ಮದುವೆ ದಿಬ್ಬಣ ಬರುವಾಗಲೇ, ಪಕ್ಕದ ಮೊರಾದಾಬಾದ್‌ನಿಂದ(Moradabad) ಮತ್ತೋರ್ವ ಮದುಮಗ ತನ್ನ ಕಾರಿನಲ್ಲಿ ತಮ್ಮ ಕಡೆಯವರನ್ನು ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಗೊಂದಲವುಂಟಾಗಿ ‘ನಾನೇ  ವರ’, ‘ನಾನೇ ವರ’ ಎಂದು ಇಬ್ಬರಲ್ಲಿ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.

ಇದರಿಂದ ವಧುವಿನ ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಆಶ್ಚರ್ಯವಾಗಿದೆ. ಮದುವೆ ಹಾಲ್(Marriage Hall)  ಮುಂದೆ ಇಬ್ಬರು ವರನ ಕಾರುಗಳು ಮತ್ತು ಮದುವೆಗೆ ಸಜ್ಜಾಗಿ ನಿಂತಿರುವುದು ನೋಡಿದರು.  ಪೊಲೀಸರು ನಡೆಸಿದ ವಿಚಾರಣೆಯಲ್ಲಿ ವಿಚಿತ್ರ ಸನ್ನಿವೇಶದ ಬಗ್ಗೆ ತಿಳಿದುಬಂದಿದೆ.

ವಧುವಿಗೆ  ಮೊದಲು ಮೊರಾದಾಬಾದ್‌ನ ಸಂಬಂಧಿಕರೊಬ್ಬರ ಜೊತೆ ನಿಶ್ಚಿತಾರ್ಥವಾಗಿತ್ತು(Youngagement). ಆದರೆ ನಂತರದಲ್ಲಿ ಎರಡೂ ಕುಟುಂಬಗಳ ನಡುವೆ ಜಗಳ ಉಂಟಾಗಿ ಆ ನಿಶ್ಚಿತಾರ್ಥ ಮುರಿದುಬಿದ್ದು ಮದುವೆ  ರದ್ದುಗೊಳಿಸಲಾಗಿತ್ತು. ಬಳಿಕ, ಮದುವೆಗೆ ಮಾಡಿದ ಖರ್ಚು ಮತ್ತು ಇತರ ನಷ್ಟವನ್ನು ತಪ್ಪಿಸಲು ವಧುವಿನ ಪೋಷಕರು ಶೀಘ್ರವೇ ಸಂಭಲ್‌ನ ವ್ಯಕ್ತಿ ಜೊತೆ ಅದೇ ದಿನಾಂಕಕ್ಕೆ ಮದುವೆ ನಿಗದಿಪಡಿಸಿದ್ದರು. ಆದರೆ ನಿಶ್ಚಿತಾರ್ಥ ಮುರಿದು ಬಿದ್ದರೂ ಈಗಾಗಲೇ ಮದುವೆ ಪತ್ರಿಕೆಯನ್ನ(Wedding Cards)  ಸಂಬಂಧಿಕರಿಗೆ ಹಂಚಿರುವುದನ್ನೇ ನೆಪವಾಗಿಟ್ಟುಕೊಂಡು ಮೊರಾದಾಬಾದ್ ಕುಟುಂಬದವರು ಹಠಾತ್ತನೆ ಮಂಟಪಕ್ಕೆ ದಿಬ್ಬಣದೊಂದಿಗೆ ಆಗಮಿಸಿದ್ದರು.

ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸುತ್ತಾ  ಕೊನೆಯ ನಿರ್ಧಾರವನ್ನು ವಧುವಿನ ಕುಟುಂಬಕ್ಕೇ ಬಿಟ್ಟರು. ವಧುವಿನ ಕುಟುಂಬವು ತಾನು ಮಾಡಿಕೊಂಡ ಹೊಸ ನಿಶ್ಚಿತಾರ್ಥದಂತೆ ಸಂಭಲ್ ವರನ ಜೊತೆ ಮದುವೆ ನಡೆಸುವುದಾಗಿ ತಿಳಿಸಿದರು. ಇದರಿಂದ ಮೊರಾದಾಬಾದ್‌ನಿಂದ ಬಂದಿದ್ದ ವರನ ಕುಟುಂಬದವರು ‘ಬಂದ ದಾರಿಗೆ ಸುಂಕ ಇಲ್ಲ’ವೆಂಬಂತೆ  ವಾಪಸ್ ತೆರಳಿದ್ದಾರೆ.

ಎರಡೂ ಕಡೆಯವರು ಪರಸ್ಪರ ತಿಳುವಳಿಕೆ ಬಂದಿದ್ದರಿಂದ  ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ವಧುವಿನ ಪೋಷಕರು ಸಂಭಲ್ ವರನ ಜೊತೆಗೆ ಮಗಳ ಮದುವೆಯನ್ನು  ನೆರವೇರಿಸಿ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನು ಓದಿ : ಅಂತ್ಯಸಂಸ್ಕಾರ ಮುಗಿಸಿ ವಾಪಸ್ಸಾಗುತ್ತಿದ್ದವರ ಕಾರಿಗೆ ಡಂಪರ್ ಢಿಕ್ಕಿ. ಓರ್ವ ಮೃತ. ಲಾರಿ ಚಾಲಕ ಎಸ್ಕೇಪ್.

ಐಪಿಎಲ್ ಬೆಟ್ಟಿಂಗ್ ದಂಧೆ. ಪೊಲೀಸರಿಂದ ಹಲವರ ಬಂಧನ.