ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಬೆಳಗಾವಿ(Belagavi) : ಉತ್ತರಕನ್ನಡ ಜಿಲ್ಲೆಯ(Uttarakannada District) ಕುಮಟಾ ಪುರಸಭಾ(Kumta TMC) ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಅವರಿಂದ ಕಿರುಕುಳದ ಎದುರಿಸಿ ನೊಂದು  ನಾಪತ್ತೆಯಾಗಿದ್ದ ಕಂದಾಯ ನಿರೀಕ್ಷಕ(Revenue Inspector) ವೆಂಕಟೇಶ ಆರ್ ಬೆಳಗಾವಿಯಲ್ಲಿ(Belagavi) ಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.

ನಿನ್ನೆ ಬೆಳಿಗ್ಗೆ ಮೂರು‌‌ ಗಂಟೆ  ಸುಮಾರಿಗೆ ವೆಂಕಟೇಶ ಭಟ್ಕಳದ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ(Bhatkal Town Station) ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿದ್ದರು. ಈ ನಡುವೆ  ವೆಂಕಟೇಶ ಬೇರೆ ಮೊಬೈಲ್  ಮೂಲಕ ಮನೆಗೆ ಸಂಪರ್ಕ ಸಾಧಿಸಿದ್ದರು.  ಮೊಬೈಲ್ ನಂಬರ್ ಆಧಾರಿಸಿ ಪೊಲೀಸರು  ತೀವ್ರ ತನಿಖೆ ಆರಂಭಿಸಿದರು. ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡುವ ಮೂಲಕ ಮತ್ತು ಸ್ಥಳೀಯ ಮಾರ್ಕೆಟ್ ಪ್ರದೇಶದ ಮಾಹಿತಿ ಪರಿಶೀಲಿಸಿ  ವೆಂಕಟೇಶ ಇರುವ ಸ್ಥಳವನ್ನ ಪತ್ತೆ ಮಾಡಿದರು.

ಸದ್ಯ ವೆಂಕಟೇಶ ಬೆಳಗಾವಿಯಲ್ಲಿ(Belagavi) ಸುರಕ್ಷಿತವಾಗಿದ್ದಾರೆ  ಪೊಲೀಸರು ಅವರನ್ನು ಸಂಪರ್ಕಿಸಿದ್ದು ಭಟ್ಕಳಕ್ಕೆ ಕರೆತರುತ್ತಿದ್ದಾರೆ.  ಪೊಲೀಸರ ಕ್ಷಿಪ್ರಗತಿಯ ಕಾರ್ಯಾಚರಣೆಗೆ  ಮೆಚ್ಚುಗೆ ವ್ಯಕ್ತವಾಗಿದೆ.

ಆದರೆ ಪುರಸಭೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ವಿರುದ್ದ ವ್ಯಾಪಕ ಅಸಮಧಾನ ವ್ಯಕ್ತವಾಗಿದ್ದು ಯಾವ ಕ್ರಮವಾಗಲಿದೆ ಎಂದು ಎಲ್ಲರೂ ನಿರೀಕ್ಷೆಯಲ್ಲಿದ್ದಾರೆ.

ಇದನ್ನು ಓದಿ : ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಯುವಕ ಮೃತ್ಯು

ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದ ಕಾಂತಾರ 1. ಪ್ರಾದೇಶಿಕ ಸಿನೆಮಾ ಸಾರ್ವತ್ರಿಕವಾಗಿದ್ದಕ್ಕೆ ರಿಷಬ್ ಶೆಟ್ಟಿ ಹರ್ಷ.

ಭಟ್ಕಳ ಮೂಲದ ಆರ್ ಐ ನಾಪತ್ತೆ. ಕುಮಟಾ ಪುರಸಭೆ ಮುಖ್ಯಾಧಿಕಾರಿ ವಿರುದ್ದ ಸಿಬ್ಬಂದಿಗಳಿಂದ ಆಕ್ರೋಶ.