ಅಂಕೋಲಾ : ಶಿರೂರಿನ ಗುಡ್ಡ ಕುಸಿತ ಘಟನೆಯಾದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ವಾಹನಗಳು, ಚಾಲಕರು ಸಿಲುಕಿದ್ದಾರೆ. ಊಟ, ತಿಂಡಿ ಇಲ್ಲದೆ ಪರದಾಡುತ್ತಿದ್ದರು. ಅವರಿಗೆಲ್ಲ ಮಾನವೀಯ ದೃಷ್ಟಿಯಿಂದ ಕಾರವಾರದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಚೈತ್ರಾ ಕೊಟಾರಕರ ಮುಂದಾಗಿದ್ದಾರೆ.
ಆರಂಭದ ಕೆಲ ದಿನಗಳಿಂದ ಎಲ್ಲರೂ ಪರದಾಡುತ್ತಿದ್ದರು. ಹೀಗಾಗಿ ಸಂಕಷ್ಟದಲ್ಲಿರುವವರಿಗೆ ಕೊಂಚ ಸಹಾಯ ಮಾಡುವ ನಿಟ್ಟಿನಲ್ಲಿ ಕುಮಟಾದ ಬ್ಲಡ್ ಗ್ರೂಪ್ ನೆರವಿನಿಂದ ಮಧ್ಯಾಹ್ನದ ಊಟ ನೀಡುವ ಮಹಾತ್ಕಾರ್ಯ ಮಾಡುತ್ತಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಸುಮಾರು ಮುನ್ನುರಕ್ಕೂ ಹೆಚ್ಚು ಜನರಿಗೆ ನೀರು, ಊಟ ನೀಡುತ್ತಿದ್ದಾರೆ. ಚಪಾತಿ, ಚಿಕನ್ ಮಸಾಲಾ, ಅನ್ನ, ಸಾಂಬಾರ, ಪಾಯಸ ಹೀಗೆ ತರೇಹವರಿ ಅಡುಗೆ ಮಾಡಿ ಹೆದ್ದಾರಿಯಲ್ಲಿ ನೀಡುತ್ತಿದ್ದಾರೆ. ಕೇವಲ ಲಾರಿ ಚಾಲಕರು ಮಾತ್ರವಲ್ಲ, ಮಾಧ್ಯಮ ಪ್ರತಿನಿಧಿಗಳು ಊಟ ಮಾಡಿ ಅನ್ನದಾನಿಗಳಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ. ಕಾರವಾರ ಹಾಗೂ ಕುಮಟಾದ ಯುವಕರ ತಂಡ ಕೈ ಜೋಡಿಸುತ್ತಿದೆ