ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಕಾರವಾರದಿಂದ ಅಂಕೋಲಾ(Karwar to Ankola) ಗೆ ಸಾಗುವ ಎಡಭಾಗದ ಸುರಂಗ ಮಾರ್ಗದಲ್ಲಿ(Tunnel Route) ಸಂಚಾರ ಪುನಃ ಆರಂಭಿಸಲು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ(DC K Lakshmipriya) ಆದೇಶಿಸಿದ್ದಾರೆ.
ಹೀಗಾಗಿ ಅಕ್ಟೋಬರ್ ಒಂದರಿಂದ ಎಲ್ಲಾ ತರಹದ ವಾಹನಗಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಇಂದಿನಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಸುರಂಗ ಮಾರ್ಗದ ಒಂದು ಬದಿಯಲ್ಲಿ ಬಂಡೆಗಲ್ಲುಗಳು, ಮಣ್ಣು ಬಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು. ಮಳೆಗಾಲ ಆಗಿದ್ದರಿಂದ ಒಂದು ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಪುನಃ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅಸ್ತು ಎಂದಿದೆ. ಪೊಲೀಸ್ ಇಲಾಖೆಯಿಂದ(Police Department) ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಇದನ್ನು ಓದಿ : ವಿಮಾನ ನಿಲ್ದಾಣದಲ್ಲಿ ದಾಂಡಿಯಾ, ಗಾರ್ಭ ನೃತ್ಯ ಮಾಡಿದ ಪ್ರಯಾಣಿಕರು, ಗಗನಸಖಿಯರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ. ಇಬ್ಬರು ಪಾರು.
ಗೋಕರ್ಣದ ಗುಹೆಯಲ್ಲಿ ಮಕ್ಕಳೊಂದಿಗೆ ಸಿಕ್ಕ ರಷ್ಯಾ ಮಹಿಳೆ ಸುರಕ್ಷಿತವಾಗಿ ತಾಯ್ನಾಡಿಗೆ.