ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ನಗರದ ಅಮೃತ್ ಓರಾ(Amrut Aura) ಹೋಟೆಲ್‌ ಮೊದಲ ಮಹಡಿಯ ಕಿಟಕಿಯಿಂದ ವಿದೇಶಿ ಪ್ರಜೆಯೊಬ್ಬರು ಕೆಳಕ್ಕೆ ಬಿದ್ದ ಘಟನೆ ಸಂಭವಿಸಿದೆ.

ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದ್ದು  ರಷ್ಯಾ ಪ್ರಜೆಯೊಬ್ಬರು(Russai n Citizen)  ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಇವಾನ್ ಡೆನೆವಾ (40) ಎಂದು ಗುರುತಿಸಲಾಗಿದೆ.

ರಷ್ಯಾದ  ಮೂಲದ ಇವಾನ್  ಕದಂಬ ನೌಕಾನೆಲೆಯಲ್ಲಿ ಟೆಕ್ನಿಶಿಯನ್ ಆಗಿ ಕಾರವಾರಕ್ಕೆ ಬಂದಿದ್ದರು ಎನ್ನಲಾಗಿದೆ. ರಾತ್ರಿ ವೇಳೆ ಹೋಟೇಲ್‌ನ ಬಾಲ್ಕನಿಯಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಗೋವಾದ ಖಾಸಗಿ ಆಸ್ಪತ್ರೆಗೆ(Goa Private Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸ್ಥಳಕ್ಕೆ  ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರವಾರ ನಗರ ಠಾಣಾ(Karwar Town Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನು ಓದಿ : ಭಟ್ಕಳ ತಾಲೂಕಿನ ಎರಡು ದೇವಸ್ಥಾನದ ಹುಂಡಿ ಕಳ್ಳತನ. ದಾರಿ ಮಧ್ಯೆ ಸಿಕ್ಕ ಹಂಡೆ ಯಾರದ್ದು?