ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಮಧ್ಯಪ್ರದೇಶ (Madhyapradesh) : ಒಂದೇ ಒಂದು ದಿನವೂ ಸೇವೆ ಸಲ್ಲಿಸದ ವ್ಯಕ್ತಿಯೋರ್ವ ಹನ್ನೆರಡು ವರ್ಷಗಳ ವೇತನ ಪಡೆದ ಘಟನೆ ಬೆಳಕಿಗೆ ಬಂದಿದೆ.
ಬರೋಬ್ಬರಿ ಸುಮಾರು 35 ಲಕ್ಷ ರೂಪಾಯಿ ಪಡೆದ ಪೊಲೀಸ್ ಕಾನ್ಸ್ಟೆಬಲ್ (Constable) ಸ್ಟೋರಿಯಿದು.ಮಧ್ಯಪ್ರದೇಶದ(Madhyapradesh) ವಿದಿಶಾ ಜಿಲ್ಲೆಯಲ್ಲಿ 2011ರಲ್ಲಿ ಪೊಲೀಸ್ ಕಾನ್ಸಟೆಬಲ್ ಹುದ್ದೆಗೆ ನೇಮಕವಾಗಿದ್ದ ಅಭಿಷೇಕ್ ಎಂಬ ವ್ಯಕ್ತಿಯನ್ನು ಸಗರ ಪೊಲೀಸ್ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆತ ತರಬೇತಿ ಕೇಂದ್ರಕ್ಕೆ ಹೋಗದೆ ಮನೆಗೆ ಮರಳಿದ್ದ. ಆದರೂ ವೇತನ ಮಾತ್ರ ಪ್ರತಿ ತಿಂಗಳು ಆತನ ಬ್ಯಾಂಕ್ ಖಾತೆಗೆ ಜಮಾ ಆಗಿದೆ.
ಪೊಲೀಸ್ ತರಬೇತಿ ಕೇಂದ್ರಕ್ಕೆ(Police Training Centre) ಆತ ತರಬೇತಿಗೆ ಹೋಗಿಲ್ಲವಾದರೂ ಮತ್ತು ನಿರಂತರವಾಗಿ ಆತನ ಖಾತೆಗೆ ಸಂಬಳ ಜಮಾ ಆಗುತ್ತಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ ಎನ್ನಲಾಗಿದೆ.
ಕರ್ತವ್ಯಕ್ಕೆ ಗೈರು ಹಾಜರಾದರೂ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ, ರಜೆಗೆ ಅರ್ಜಿಯನ್ನೂ ಸಲ್ಲಿಸಿಲ್ಲ. ಒಂದು ದಿನವೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡದಿದ್ದರೂ ಇಲಾಖೆಯಲ್ಲಿ ಆತನ ಹೆಸರು ದಾಖಲಾಗಿದೆ. ಮಾತ್ರವಲ್ಲ, 35 ಲಕ್ಷ ರೂ. ವೇತನ ಆತನ ಖಾತೆಗೆ ಜಮಾ ಆಗಿರೋದು ಗೊತ್ತಾಗಿದೆ.
ಕಾನಸ್ಟೇಬಲ್ ತನ್ನ ಸೇವಾ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಭೋಪಾಲ್(Bhopal) ಪೊಲೀಸ್ ಲೈನ್ಸ್ ಗೆ ಕಳುಹಿಸಿದ್ದಾನೆ. ಆದರೆ, ಇದ್ಯಾವುದನ್ನೂ ಪರಿಶೀಲಿಸದೆ ದಾಖಲೆಗಳನ್ನು ಸ್ವೀಕರಿಸಿ ಅನುಮೋದಿಸಲಾಗಿದೆ. ತರಬೇತಿ ಕೇಂದ್ರದಲ್ಲಿ ಯಾರೂ ಅವನ ಗೈರುಹಾಜರಿಯನ್ನು ಗಮನಿಸಿಲ್ಲ. ಇಲಾಖೆಯಲ್ಲಿ ಬೆಳಕಿಗೆ ಬಂದಿರುವ ಈ ಪ್ರಕರಣ ಹಲವರ ನಿದ್ದೆಗೆಡಿಸಿದೆ. 2011ರ ಬ್ಯಾಚ್ ನಲ್ಲಿ ತರಬೇತಿ ಪಡೆದು ಸೇವೆ ಸಲ್ಲಿಸುತ್ತಿರುವವರಿಗೆ ಬಡ್ತಿ ನೀಡಲು ಕಡತ ಪರಿಶೀಲಿಸಿದಾಗ ಈ ಮಾಹಿತಿ ಗೊತ್ತಾಗಿದೆ.
ವೇತನ ಪಡೆಯುತ್ತಿದ್ದ ಪೊಲೀಸ್ ಕಾಸ್ಟೇಬಲ್ ನೋಡಿದ ನೆನಪು ಯಾರಿಗೂ ಇರಲಿಲ್ಲ. ಆಂತರಿಕ ತನಿಖೆಯಲ್ಲಿ ಅಧಿಕಾರಿಗಳು ಕಾಸ್ಟೇಬಲ್’ನ ಹಿಂದಿನ ದಾಖಲೆಗಳು ಮತ್ತು ಸೇವಾ ಮಾಹಿತಿಯನ್ನು ಪತ್ತೆಹಚ್ಚಲು ಪ್ರಯತ್ನಿಸಿದರೂ ಅದು ವಿಫಲವಾಗಿದೆ. 12 ವರ್ಷಗಳ ಕಾಲ ಒಬ್ಬ ವ್ಯಕ್ತಿ ಕೆಲಸದಲ್ಲಿದ್ದು ಯಾವುದೇ ಮಾಹಿತಿ ಇಲ್ಲದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ವಿಚಾರಣೆಗಾಗಿ ಕಾನಸ್ಟೇಬಲನನ್ನು ಕರೆಸಿದ್ದಾರೆ. ವಿಚಾರಣೆ ವೇಳೆ ಆತ ತನಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ.
ಇದನ್ನು ಓದಿ : ರೇಬಿಸ್ ಗೆ ಒಳಗಾದ ಹೋರಿಯಿಂದ ರಂಪಾಟ. ವ್ಯಕ್ತಿಗೆ ತಿವಿತ.
ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿಯೇ ಮಹಿಳೆಗೆ ಹೆರಿಗೆ ಮಾಡಿಸಿದ ಸೇನಾ ವೈದ್ಯ.