ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಶಾಸಕ ಸತೀಶ್ಸೈಲ್(MLA Satish Sail) ಅವರು ಕಾರವಾರದಲ್ಲಿ ನಡೆದ ‘ಕರಾವಳಿ ಉತ್ಸವ’ದ(Karavali Utsav) ಸಮಾರೋಪ ಸಮಾರಂಭಲ್ಲಿ ಭಾಗವಹಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ(DCM D K Shivkumar) ದುಬಾರಿ ಬೆಲೆಯ ಗಿಪ್ಟ್ ನೀಡಿದ್ದಾರೆ.
ಭಾನುವಾರ ರಾತ್ರಿ ನಗರದ ಮಯೂರವರ್ಮ ವೇದಿಕೆಯಲ್ಲಿ(Mayuravarma Vedike) ನಾಲ್ಕುವರೆ ಅಡಿ ಎತ್ತರದ ಸುಮಾರು 16 ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧದಿಂದ(Sandalwood) ತಯಾರಿಸಿದ ವಿಷ್ಣುವಿನ ದಶಾವತಾರ ಕಲಾಕೃತಿಯ ಮೂರ್ತಿಯನ್ನು ಡಿಸಿಎಂಗೆ ನೀಡಿ ಜಿಲ್ಲಾಡಳಿತ ವತಿಯಿಂದ ಗೌರವಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಸತೀಶ್ ಸೈಲ್, ಡಿ.ಕೆ.ಶಿವಕುಮಾರ್(D K Shivkumar) ಅವರ ಮನಸ್ಸಿನಲ್ಲಿರುವ ಎಲ್ಲಾ ಬಯಕೆಗಳು ಶೀಘೃದಲ್ಲಿ ಈಡೇರಲಿ ಎಂಬ ಆಶಯದೊಂದಿಗೆ ಈ ಉಡುಗೊರೆಯನ್ನು ನೀಡುತ್ತಿದ್ದೇನೆ. ಅವರು ನಮಗೆ ನೀಡಿರುವ ಆಶ್ವಾಸನೆಗಳೂ ಆದಷ್ಟು ಬೇಗ ಕಾರ್ಯರೂಪಕ್ಕೆ ಬರುವಂತಾಗಲಿ ಎಂದು ಹಾರೈಸಿದರು.
2025ರ ಕರಾವಳಿ ಉತ್ಸವದ ವೇದಿಕೆಯಲ್ಲಿ ಈ ವಿಶೇಷ ಉಡುಗೊರೆ ನೆರೆದ ಎಲ್ಲರ ಗಮನ ಸೆಳೆಯಿತು. ಕುಮಟಾದ ಮಹಾಲಸಾ ಹ್ಯಾಂಡಿಕ್ರಾಪ್ಟ್ ನವರು ಶ್ರೀಗಂಧದ ವಿಷ್ಣುವಿನ ಕಲಾಕೃತಿ ರಚಿಸಿದ್ದರು.
ಇದನ್ನು ಓದಿ : ಕಾರವಾರದಲ್ಲಿ ಜಲಾಂತರ್ಗಾಮಿ ಯುದ್ದ ನೌಕೆಯಲ್ಲಿ ಮಹಿಳಾ ರಾಷ್ಟ್ರಪತಿ.
