ನವದೆಹಲಿ(Newdelhi) : ಇಂದು ಮತ್ತು ನಾಳೆ  ಒಡಿಶಾ(Odissa) ಹಾಗೂ ಪಶ್ಚಿಮ ಬಂಗಾಳ(West Bengal) ರಾಜ್ಯಗಳಿಗೆ ಚಂಡಮಾರುತ (Cyclone)ಅಪ್ಪಳಿಸುವ ಸಾಧ್ಯತೆ ಬಗ್ಗೆ  ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ(Warning) ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಡಾನಾ ಚಂಡಮಾರುತವಾಗಿ ಮಾರ್ಪಟ್ಟಿದೆ. ಹೀಗಾಗಿ ಅಕ್ಟೋಬರ್ 24 ಹಾಗೂ 25ರಂದು ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಡಾನಾ ಚಂಡಮಾರುತ ಅಪ್ಪಳಿಸಲಿದ್ದು, ಬಿರುಗಾಳಿ ಸಹಿತ ಬಾರೀ ಮಳೆಯಾಗಲಿದೆ. ಎರಡೂ ರಾಜ್ಯಗಳಲ್ಲಿಯೂ ಕಟ್ಟೆಚ್ಚರ (Alert) ಘೋಷಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಅ.22ರಂದು ವಾಯುಭಾರ ಕುಸಿತವುಂಟಾದ ಪರಿಣಾಮ  ಚಂಡಮಾರುತ ಸೃಷ್ಟಿಯಾಗಿದೆ.  ಈಗಾಗಲೇ ಉತ್ತರದ ಅಂಡಮಾನ್ ನಿಕೋಬಾರ್(Andaman Nikobar) ಕಡಲತೀರದಲ್ಲಿ ಚಂಡಮಾರುತದ ಅಬ್ಬರ ಶುರುವಾಗಿದೆ.

ಚಂಡಮಾರುತ ಆಗ್ನೇಯ ದಿಕ್ಕಿನಲ್ಲಿ ಚಲಿಸಲಿದ್ದು, ಗಂಟೆಗೆ 520ಕಿ.ಮೀ ವೇಗದಲ್ಲಿ ಮುನ್ನುಗ್ಗಲಿದೆ. ಓಡಿಶಾಗೆ ಅಪ್ಪಳಿಸುವ ಚಂಡಮಾರುತ ತನ್ನ ಶಕ್ತಿ ಕಳೆದುಕೊಳ್ಳುತ್ತಾ ಗಂಟೆಗೆ 110ಕೀಮೀ ಯಿಂದ 120ಕಿ.ಮೀ ವೇಗದಲ್ಲಿ ಚಲಿಸಲಿದೆ. ಎರಡೂ ರಾಜ್ಯಗಳಲ್ಲಿಯೂ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ರೆಡ್ ಅಲರ್ಟ್(Red Alert) ಘೋಷಿಸಲಾಗಿದೆ.

ಇದನ್ನು ಓದಿ : ಬಸ್ ಇಲ್ಲದೆ ರಾತ್ರಿ ಹೆಣ್ಣುಮಕ್ಕಳಿಗೆ ತೊಂದರೆ

ಭಟ್ಕಳದಲ್ಲಿ ಮತ್ತೆ ಗೋವು ಕಳ್ಳರ ಅಟ್ಟಹಾಸ

ಅಕ್ಟೋಬರ್ 26ರಂದು ಕಾರವಾರದಲ್ಲಿ ಉದ್ಯೋಗ ಮೇಳ

ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಪ್ಪನೇ ಬಿತ್ತು ಆಲದ ಮರದ ಕೊಂಬೆ