ಬೆಂಗಳೂರು (Bengaluru): ಉತ್ತರಕನ್ನಡ ಜಿಲ್ಲೆಯ ಭಟ್ಕಳ  ಮೂಲದ (Bhatkal Native) ಮೂವರು ಉಗ್ರರಿಗೆ ಎನ್‌ಐಎ (NIA) ಪ್ರಕರಣಗಳ ವಿಶೇಷ ನ್ಯಾಯಾಲಯ ಶಿಕ್ಷೆ  ಪ್ರಕಟಿಸಿದೆ.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ (Barack Obama) ಭೇಟಿಗೂ ಮುನ್ನ ಸ್ಫೋಟ ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಎನ್ ಎ ಐ (NIA) ಹಲವರನ್ನ ಬಂಧಿಸಿತ್ತು. ಡಾ. ಸೈಯದ್ ಇಸ್ಮಾಯಿಲ್ ಅಫಾಕ್ ಲಂಕಾ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇನ್ನಿಬ್ಬರಾದ ಅಬ್ದುಲ್ ಸಬೂ‌ರ್ ಮತ್ತು ಸದ್ದಾಂ ಹುಸೇನ್‌ಗೆ ಹತ್ತು ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ.

ನ್ಯಾಯಾಲಯವು ಅಫಾಕ್‌ಗೆ 1.55 ಲಕ್ಷ ರೂಪಾಯಿ ಹಾಗೂ ಸಬೂರ್ ಮತ್ತು ಹುಸೇನ್‌ಗೆ ತಲಾ 95ಸಾ. ರೂಪಾಯಿ ದಂಡ ವಿಧಿಸಿದೆ. ಮೂವರಿಗೆ ಐಪಿಸಿ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ  ಜಾರಿಯಾಗಿದೆ.

ಬೆಂಗಳೂರು ನಗರದ ಪುಲಕೇಶಿನಗರ ಪೊಲೀಸ್‌ ಠಾಣೆಯಲ್ಲಿ (Pulikeshinagar Police Station) 2015ರಲ್ಲಿ  ಪ್ರಕರಣ ದಾಖಲಾಗಿತ್ತು. ಆಗೀನ ಸಿಸಿಬಿ(CCB) ಎಸಿಪಿ ತಮ್ಮಯ್ಯ ಎಂ ಕೆ  ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣವೇನು? : ಅಮೆರಿಕ ಅಧ್ಯಕ್ಷ(America President) ಬರಾಕ್ ಒಬಾಮಾ (Barack Obama) ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯವು (NIA Court) ಮೂವರು ಶಂಕಿತ ಭಯೋತ್ಪಾದಕರನ್ನು ದೋಷಿ ಎಂದು ತೀರ್ಪು ನೀಡಿತ್ತು.

ಭಟ್ಕಳದ (Bhatkal) ನಿವಾಸಿಗಳಾದ ಸೈಯದ್ ಇಸ್ಮಾಯಿಲ್ ಅಫಾಕ್ ಲಂಕಾ(44), ಆತನ ಸೋದರ ಸಂಬಂಧಿ, ಎಂಬಿಎ ವಿದ್ಯಾರ್ಥಿಯಾಗಿದ್ದ ಅಬ್ದುಲ್ ಸಬೂರ್ (34) ಮತ್ತು ಗುಜರಿ ವ್ಯಾಪಾರಿ ಸದ್ದಾಂ ಹುಸೇನ್‌ (46) ಅವರು ಒಬಾಮಾ ಅವರ ಭಾರತ ಭೇಟಿಯ ಸಂದರ್ಭದಲ್ಲಿ 2015 ರ ಜನವರಿ 26 ಗಣರಾಜ್ಯೋತ್ಸವದಂದು (Republic Day) ಸ್ಫೋಟಗಳನ್ನು ನಡೆಸಲು ಯೋಜಿಸಿದ್ದರು ಎಂದು ನ್ಯಾಯಾಲಯವು ಮನಗಂಡಿದೆ. ಪ್ರಕರಣದಲ್ಲಿ ಭಟ್ಕಳದ (Bhatkal) ನಿವಾಸಿಗಳಾದ ರಿಯಾಜ್ ಅಹ್ಮದ್ ಮತ್ತು ಜೈನುಲ್ಲುದ್ದೀನ್ ಎಂಬ ಇಬ್ಬರು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿತ್ತು.

ಭಟ್ಕಳದ ನಿವಾಸಿ ಅಫಾಕ್ ಲಂಕಾನನ್ನು ಯುಎಪಿಎ ಸೆಕ್ಷನ್ 13, 20, 23, ಮತ್ತು 38 ರ ಅಡಿಯಲ್ಲಿ ಹಾಗೂ ಸ್ಫೋಟಕಗಳ ಕಾಯ್ದೆಯ ಸೆಕ್ಷನ್‌ 4 ಮತ್ತು 5ರ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಲಾಗಿದೆ.

ಭಟ್ಕಳದ ಮುಖ್ಯ ರಸ್ತೆಯ ಪಕ್ಕದಲ್ಲಿ  ಕ್ಲಿನಿಕ್ ಇಟ್ಟುಕೊಂಡಿದ್ದ  ಹೋಮಿಯೋಪಥಿಕ್ ವೈದ್ಯ ಅಫಾಕ್ ಲಂಕಾ ಪಾಕಿಸ್ತಾನಿ ಮಹಿಳೆಯನ್ನ (Pakistani Women) ಮದುವೆಯಾಗಿದ್ದ. ಪಾಕಿಸ್ತಾನಿ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದ. ತನ್ನ ಪತ್ನಿಯನ್ನು ಭೇಟಿ ಮಾಡುವ ನೆಪದಲ್ಲಿ ಆತ ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಪಡೆದಿದ್ದ ಎಂದು ದೂರಲಾಗಿದೆ. ಮುಂಬೈ(Mumbai), ಪುಣೆ (Pune) ಮತ್ತು ದೆಹಲಿ(Delhi) ಬಾಂಬ್ ಸ್ಫೋಟಗಳಿಗೆ ಸ್ಫೋಟಕಗಳನ್ನು ಪೂರೈಸುವಲ್ಲಿ ಈತ ಭಾಗಿಯಾಗಿದ್ದ ಎಂಬ ಆರೋಪವಿದೆ. ವಿಶೇಷ ಎನ್‌ಐಎ ನ್ಯಾಯಾಲಯದ ಪ್ರಕಾರ, ಪ್ರಮುಖ ಆರೋಪಿಗಳಾದ ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್  ಭಟ್ಕಳ್ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯ ತಿಳಿದುಕೊಂಡಿದೆ.

ಇದನ್ನು ಓದಿ : ಭಟ್ಕಳದಲ್ಲಿ ಬೈಕ್ ಕದ್ದು ಹೆದರಿ ಮತ್ತೆ ಬಿಟ್ಟು ಹೋದ ಕಳ್ಳ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ. ನಾಲ್ವರ ದುರ್ಮರಣ.

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರಗೆ ಸತತ ಆರು ಗಂಟೆ ವೈದ್ಯರಿಂದ ಆಪರೇಷನ್.