ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕುಮಟಾ (Kumta): ತಾಲೂಕಿನ ಬಾಡ ಕಡಲತೀರದಲ್ಲಿ ಹಡಗಿನ ರ್ಯಾಪ್ಟ್ ಒಂದು ಬಂದು ಬಿದ್ದಿದೆ. ಕೆಲ ದಿನಗಳ ಹಿಂದೆ ಕೇರಳದ ಕೊಚ್ಚಿಯಲ್ಲಿ(Kerala Kochhi) ಮುಳುಗಿದ ಹಡಗಿನ ರ್ಯಾಪ್ಟ್ ಇದಾಗಿರಬಹುದು ಶಂಕೆ ವ್ಯಕ್ತವಾಗಿದೆ.
ಮಂಗಳವಾರ ರಾತ್ರಿ ಈ ವಸ್ತು ಬಂದಿದ್ದು ಸ್ಥಳೀಯರು ಕರಾವಳಿ ಕಾವಲು ಪಡೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಎಸ್ಪಿ(CSP) ಅಧಿಕಾರಿಗಳು ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.
ಮೇ 24ರಂದು ಲೈಬೀರಿಯನ್ ಧ್ವಜ ಹೊತ್ತ ಕಂಟೇನರ್ ಹಡಗು ಎಂಎಸ್ಸಿ ಎಲ್ಸಾ 3 (MSC ELSA 3) ಹಡಗು ಮುಳುಗಿತ್ತು. ನೌಕೆಯಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ(Indian Coast Guard) ಸುರಕ್ಷಿತವಾಗಿ ರಕ್ಷಿಸಿತ್ತು. ಕೊಚ್ಚಿಯಲ್ಲಿ ಮುಳುಗಿದ ಹಡಗು 640 ಕಂಟೇನರ್ಗಳನ್ನು ಹೊತ್ತೊಯ್ಯುತಿತ್ತು, ಅವುಗಳಲ್ಲಿ 13 ಅಪಾಯಕಾರಿ ಸರಕುಗಳನ್ನು ಹೊಂದಿದ್ದವು ಮತ್ತು 12 ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಹೊಂದಿದ್ದವು ಎಂದು ಹೇಳಲಾಗಿತ್ತು.
ಹೆಚ್ಚುವರಿಯಾಗಿ ಹಡಗಿನಲ್ಲಿ 84.44 ಮೆಟ್ರಿಕ್ ಟನ್ ಡೀಸೆಲ್ ಮತ್ತು 367.1 ಮೆಟ್ರಿಕ್ ಟನ್ ಫರ್ನೇಸ್ ಆಯಿಲ್ ಇತ್ತು” ಎಂದು ಕೋಸ್ಟ್ ಗಾರ್ಡ್(Coast Guard) ತಿಳಿಸಿತ್ತು. ಆದರೆ ಈ ರ್ಯಾಪ್ಟ್ ಮುಳುಗಿದ ಹಡಗಿನದ್ದಾ ಅಥವಾ ಬೇರೆ ಯಾರದ್ದು ಎಂಬುದನ್ನ ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.
ಇದನ್ನು ಓದಿ : ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಸೋಮಶೇಖರ್ ಉಚ್ಚಾಟನೆ. ಸದ್ಯದಲ್ಲೇ ಜಾತಕ ಬಿಚ್ಚಿಡುತ್ತೇನೆ : ಹೆಬ್ಬಾರ್.
ರಾತ್ರಿ ಕಾರ್ಯಾಚರಣೆ. ಅಕ್ರಮ ಮರಳು ಸಾಗಿಸುತ್ತಿದ್ದ ಎರಡು ವಾಹನ ಜಪ್ತಿ.