ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಚಿಕ್ಕಮಗಳೂರು : ಮದುವೆ ಮಂಟಪದಲ್ಲಿ ವಧುವಿನ ಚಿನ್ನಾಭರಣ ಕಳ್ಳತನ (Gold Theft) ಮಾಡಿದ ಘಟನೆ ಮೂಡಿಗೆರೆ(Mudigeri) ತಾಲೂಕಿನ ಹಾಂದಿ ಗ್ರಾಮದ ಶಾಲಿಮಾರ್ ಹಾಲ್ ನಲ್ಲಿ(Shalimar Hall) ನಡೆದಿದೆ.
ವರನ ಮನೆಯವರು ತಂದಿದ್ದ ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣವನ್ನ ಅವರ ಸಂಬಂಧಿಕರು ಕೊಣೆಯೊಂದರಲ್ಲಿ ಇಟ್ಟು ಲಾಕ್ ಮಾಡಿದ್ದಾರೆನ್ನಲಾಗಿದೆ. ವಧು ವರನ ಸಂಬಂಧಿಕರೆಲ್ಲರೂ ಮುಹೂರ್ತ(Muhurtam) ಕಾರ್ಯದಲ್ಲಿ ಬ್ಯುಸಿಯಾಗಿದ್ದರು.
ಇದೇ ವೇಳೆ ಸ್ಲೈಡಿಂಗ್ ಕಿಟಕಿಯಿಂದ ನುಸುಳಿ ರೂಮ್ ಲಾಕ್ ಮಾಡಿ ಕಳ್ಳರ ಕೈಚಳಕ ಪ್ರದರ್ಶಿಸಿದ್ದಾರೆ. ಮೂರುವರೆ ಲಕ್ಷ ಮೌಲ್ಯದ ನೆಕ್ಲೆಸ್(Neckless) ಹಾಗೂ ಕಿವಿ ಓಲೆ ಕದ್ದು ಕಳ್ಳರು ಎಸ್ಕೇಪ್ ಆಗಿದ್ದಾರೆ. ಬಂಗಾರ ಇಲ್ಲದೆ ವಿವಾಹದ ಮಂಟಪದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಕಲ್ಯಾಣ ಮಂಟಪ(Kalyana Mantap) ಪಕ್ಕದಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಒಳ ನುಗ್ಗಿರುವ ಖದೀಮರು ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಆಲ್ದೂರು ಪೊಲೀಸರ(Aldooru Police) ಭೇಟಿ ನೀಡಿ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ : ಶರಾವತಿ ಹಿನ್ನೀರಿನಲ್ಲಿ ತೆಪ್ಪ ದುರಂತ
ಬೇಲೆಕೇರಿ ಪ್ರಕರಣ ಶಾಸಕ ಸತೀಶ್ ಸೈಲ್ ಗೆ ಜಾಮೀನು
ಭಟ್ಕಳದಲ್ಲಿ ಸಿಡಿದೆದ್ದ ಕಾರ್ಮಿಕರು