ಹೈದ್ರಾಬಾದ್(Hyderbad) : ಮದುವೆ ಸಮಾರಂಭದಲ್ಲಿ(Marriage Celebration) ವಧು-ವರರಿಗೆ ಶುಭ ಕೋರುವ ಸಂದರ್ಭದಲ್ಲೇ ಹೃದಯಾಘಾತದಿಂದ(Heart attack) ಕುಸಿದು ವ್ಯಕ್ತಿಯೊರ್ವ ಮೃತಪಟ್ಟ ಘಟನೆ ಆಂಧ್ರಪ್ರದೇಶದ (Andrapradesh)ಕರ್ನೂಲ್ ನಲ್ಲಿ ನಡೆದಿದೆ.
ವಿವಾಹದ ಸಂಭ್ರಮದ ಮಧ್ಯೆ ನವದಂಪತಿಗೆ ಉಡುಗೊರೆಯನ್ನು(Presantation) ನೀಡುತ್ತಿರುವ ಸಂದರ್ಭದಲ್ಲಿ ವ್ಯಕ್ತಿ ಸಮತೋಲನ ಕಳೆದುಕೊಂಡಿದ್ದಾನೆ. ಮೃತ ಯುವಕ ವಂಶಿ ಈ ಮೊದಲು ಬೆಂಗಳೂರಿನಲ್ಲಿ ಅಮೆಜಾನ್ ನಲ್ಲಿ (Amazon) ಉದ್ಯೋಗದಲ್ಲಿದ್ದರು. ಸ್ನೇಹಿತರ ವಿವಾಹಕ್ಕಾಗಿ ಕರ್ನೂಲಿನ ಪೆನುಮುಂಡ ಗ್ರಾಮಕ್ಕೆ ಆಗಮಿಸಿದ್ದರೆನ್ನಲಾಗಿದೆ.
ಉಡುಗೊರೆ ಹಸ್ತಾಂತರಿಸಿದ ಬಳಿಕ ವರ ಉಡುಗೊರೆಯನ್ನು ಬಿಚ್ಚಿದ್ದರು. ಆಗ ವಂಶಿ ಎಡಕ್ಕೆ ವಾಲಿದರು. ಪಕ್ಕದಲ್ಲಿ ನಿಂತಿದ್ದವರು ಅವರು ಬೀಳದಂತೆ ಹಿಡಿದುಕೊಂಡಿದ್ದಾರೆ. ತಕ್ಷಣ ಧೋನ್ ಸಿಟಿ ಸರ್ಕಾರಿ ಆಸ್ಪತ್ರೆಗೆ ಅವರನ್ನು ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದರು.
ಮಧುಮೇಹ, ಕುಳಿತು ಕೆಲಸ ಮಾಡುವ ಜೀವನಶೈಲಿ, ಮಾಲಿನ್ಯ ಒತ್ತಡ, ಅಧಿಕ ವರ್ಕೌಟ್ ಮತ್ತು ಸ್ಟಿರಾಯ್ಡ್ ಅಂಶಗಳು ಇದಕ್ಕೆ ಪ್ರಮುಖ ಕಾರಣ. ಯುವಕರು ಜಿಮ್ ಗಳಲ್ಲಿ ಹಾಗೂ ಅನಿರೀಕ್ಷಿತ ಸ್ಥಳಗಳಲ್ಲಿ ಹೃದಯಸ್ತಂಭನದಿಂದ ಮೃತಪಡುತ್ತಿರುವ ಘಟನೆಗಳು ಹೆಚ್ಚುತ್ತಿವೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.
ಇದನ್ನು ಓದಿ : ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10ಲಕ್ಷಕ್ಕೆ ಏರಿಕೆ