ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಉಡುಪಿ(Udupi) : ಉಡುಪಿ ಶ್ರೀಕೃಷ್ಣ ಮಠ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಇನ್ಮುಂದೆ ಶ್ರೀಕೃಷ್ಣ ಮಠದ ರಥ ಬೀದಿಯ ಆವರಣದಲ್ಲಿ ಪ್ರೀ-ವೆಡ್ಡಿಂಗ್(Pre-wedding) ಸೇರಿ ಸಮಾಜಕ್ಕೆ ಮುಜುಗರ ಉಂಟುಮಾಡುವ ಯಾವುದೇ ಫೋಟೋಶೂಟ್‌ಗಳನ್ನು ಮಾಡದಂತೆ ನಿಷೇಧಿಸಿದೆ(photoshoot Ban).
ಪರ್ಯಾಯ ಪುತ್ತಿಗೆ ಮಠ (Puttige math) ಈ ಆದೇಶ ಹೊರಡಿಸಿದ್ದು ಮುಖ್ಯವಾಗಿ ಮಠದ ರಥ ಬೀದಿಯಲ್ಲಿ ಪ್ರೀ-ವೆಡ್ಡಿಂಗ್ (Pre-wedding) ಹಾಗೂ ಪೋಸ್ಟ್ ವೆಡ್ಡಿಂಗ್(Post wedding) ಫೋಟೋಶೂಟ್ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ.
ಅಷ್ಟಮಠದ ಯತಿಗಳು ಓಡಾಡುವ, ಭಕ್ತಿ ಶ್ರದ್ದಾ ಕೇಂದ್ರಗಳಾಗಿರುವ ರಥೋತ್ಸವ ನಡೆಯುವ ಉಡುಪಿ ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್, ಮದುವೆ ಬಳಿಕದ ಫೋಟೋ, ವಿಡಿಯೋ ಶೂಟ್‌ನ್ನು ಇನ್ಮುಂದೆ ಮಾಡುವಂತಿಲ್ಲ. ಶ್ರೀಕೃಷ್ಣ ಮಠ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಪುರಾತನ ದೇವಸ್ಥಾನ, ಕನಕಗೋಪುರ, ಅಷ್ಟಮಠಗಳ ಎದುರು, ರಥಬೀದಿಯಲ್ಲಿ ಬೆಳಗ್ಗಿನಿಂದ ಮದುವೆಯಾಗಲಿರುವ ಜೋಡಿ ಶೂಟ್ ನಿರತವಾಗುತ್ತಿತ್ತು, ಸರಸ ಸಲ್ಲಾಪದಲ್ಲಿ ತೊಡಗುತ್ತಿತ್ತು. ಇದು ನೋಡುವವರಿಗೆ ಅಸಹ್ಯ ಉಂಟು ಮಾಡುತ್ತಿತ್ತು.
ಹೀಗಾಗಿ ಭಕ್ತರಿಂದ ಬಂದ ದೂರುಗಳ ಹಿನ್ನಲೆಯಲ್ಲಿ ಅನುಚಿತ ಮತ್ತು ಮುಜುಗರದ ವೀಡಿಯೊಗಳ ಚಿತ್ರೀಕರಣವನ್ನು ಅನುಮತಿಸದಿರಲು ಪುತ್ತಿಗೆ ಮಠವು ನಿರ್ಧರಿಸಿದೆ.
ಇದನ್ನು ಓದಿ : ಹೆಬ್ಬಾರ್ ಕ್ಷೇತ್ರದಲ್ಲಿ ಬಿಜೆಪಿ ಅಬ್ಬರ. ಯಲ್ಲಾಪುರದಲ್ಲಿ ಜನಾಕ್ರೋಶ ಯಾತ್ರೆ.
ಕಾರವಾರದ ಯೋಧ ಹೃದಯಘಾತದಿಂದ ನಿಧನ. ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು, ನಾಗರಿಕರು.
ಭಟ್ಕಳದಲ್ಲಿ ಹೆದ್ದಾರಿ ತಡೆ, ಠಾಣೆಗೆ ಮುತ್ತಿಗೆ ಹಾಕಿದವರ ಮೇಲೆ ದಾಖಲಾಯ್ತು ಪ್ರಕರಣ.