ಕಾರವಾರ :  ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ *ಇಂಡಿಯಾ ಸ್ಕೆಟ್ ಗೇಮ್ಸ್ 2024(INDIA SKATE GAMES) ಚಾಂಪಿಯನಶಿಪ್ ನಲ್ಲಿ ಉತ್ತರಕನ್ನಡ ಜಿಲ್ಲೆಯ ಮೂವರು ಯುವತಿಯರು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಯಲ್ಲಾಪುರ ವಾಯ್ ಟಿ ಎಸ್ ಎಸ್ ಪದವಿ ಪೂರ್ವ ಕಾಲೇಜಿನ ಸೇಜಲ್ ಸತೀಶ ನಾಯ್ಕ, ಶಿರಸಿಯ ಎಮ್ ಈ ಎಸ್ ಕಾಲೇಜಿನ  ಅನಘಾ ರಮೇಶ ಹೆಗಡೆ ಮತ್ತು ದಾಂಡೇಲಿಯ ಸಾನಿಕಾ ಉಮೇಶ ತೊರತ್ ಕರ್ನಾಟಕ ರಾಜ್ಯ  ಸಿನಿಯರ್ ಮಹಿಳಾ ಸ್ಕೆಟಿಂಗ್ ಡರ್ಬಿ ತಂಡವನ್ನು ಪ್ರತಿನಿಧಿಸಿದ್ದರು.

ಕರ್ನಾಟಕ, ತಮಿಳನಾಡು , ಯುಪಿ, ಓರಿಸ್ಸಾ , ತಮಿಳನಾಡು ಬಿ, ಮಹಾರಾಷ್ಟ ಇನ್ನಿತರ ರಾಜ್ಯಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.  ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್ ನಲ್ಲಿ ಕಳೆದ ನಾಲ್ಕು ವರ್ಷಗಳಿಂದ  ತರಬೇತಿಯನ್ನು ಪಡೆಯುತ್ತಿದ್ದರು.    ಸತತ ನಾಲ್ಕನೆ ಬಾರಿ ಕರ್ನಾಟಕ ತಂಡವನ್ನ ಪ್ರತಿನಿಧಿಸುತ್ತಿದ್ದರು. ಇವರಿಗೆ ಮುಖ್ಯ ತರಬೇತುದಾರ ದಿಲೀಪ್ ಹಣಬರ್ ಹಾಗೂ ಸಹಾಯಕ ತರಬೇತುದಾರರಾಗಿ ಮಂಜಪ್ಪ ನಾಯ್ಕ ತರಬೇತಿ ನೀಡಿದ್ದರು. ಇವರ ಸಾಧನೆಗೆ ಪೋಷಕರು ಮತ್ತು ಕ್ರೀಡಾಭಿಮಾನಿಗಳು ಅಭಿನಂದನೆ  ಸಲ್ಲಿಸಿದ್ದಾರೆ.