ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಂಗಳೂರು(Manglore) : ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬ(Harekal Hajabba) ಅವರಿಗೆ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ನೋಟಿಸ್ ಜಾರಿಗೊಳಿಸಿದ ಪ್ರಸಂಗ ನಡೆದಿದೆ.
ತಾಂತ್ರಿಕ ಕಾರಣದಿಂದ ಆದ ಈ ದೊಡ್ಡ ಪ್ರಮಾದದ ಬಗ್ಗೆ ತಡವಾಗಿ ಎಚ್ಚೆತ್ತ ಅಧಿಕಾರಿಗಳು, ತಾವೇ ಖುದ್ದಾಗಿ ಹಾಜಬ್ಬ ಅವರ ಮನೆಗೆ ಭೇಟಿ ನೀಡಿ ಕ್ಷಮೆ ಯಾಚಿಸಿದ್ದಾರೆ.
ನೋಟಿಸ್ ಜಾರಿಯಾಗಲು ಕಾರಣವೇನು?: 2002ರ ಹಳೆಯ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕೇವಲ ‘ಹಾಜಬ್ಬ’ ಎಂದು ದಾಖಲಾಗಿತ್ತು. ಆದರೆ, ಪ್ರಸ್ತುತ ಅವರ ಉಳಿದ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’(Hajabba) ಎಂದು ನಮೂದಾಗಿರುವುದರಿಂದ ಹೆಸರು ಹೊಂದಾಣಿಕೆಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಈ ತಾಂತ್ರಿಕ ವ್ಯತ್ಯಾಸದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ(Election Commission) ಪರಿಶೀಲನಾ ಪ್ರಕ್ರಿಯೆಯ ಭಾಗವಾಗಿ ಅಧಿಕಾರಿಗಳು ನೋಟಿಸ್ ನೀಡಿದ್ದರು.
ಸೆಪ್ಟೆಂಬರ್ 11ರಂದು ಗ್ರಾಮ ಪಂಚಾಯಿತಿಗೆ(Grama Panchayat) ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಾಗುವಂತೆ ಆ ನೋಟಿಸ್‌ನಲ್ಲಿ ತಿಳಿಸಲಾಗಿತ್ತು.ಮನೆಗೆ ಬಂದು ದಾಖಲೆ ಪಡೆದ ಅಧಿಕಾರಿಗಳುಪದ್ಮಶ್ರೀ ಪುರಸ್ಕೃತರೊಬ್ಬರಿಗೆ ಇಂತಹ ನೋಟಿಸ್ ನೀಡಲಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಉಳ್ಳಾಲ(Ullal) ತಾಲೂಕಿನ ಹರೇಕಳದಲ್ಲಿರುವ ಹಾಜಬ್ಬ ಅವರ ಮನೆಗೆ ಭೇಟಿ ನೀಡಿದ ಅಧಿಕಾರಿಗಳು, ಆದ ಪ್ರಮಾದದ ಬಗ್ಗೆ ಅವರ ಬಳಿ ಕ್ಷಮೆಯಾಚಿಸಿದ್ದಾರೆ(Apology). ಬಳಿಕ ಅವರಿಗೆ ತೊಂದರೆ ಕೊಡದಂತೆ, ಅವರ ಮನೆಯಿಂದಲೇ ಅಗತ್ಯವಿದ್ದ ಎಲ್ಲಾ ಅಧಿಕೃತ ದಾಖಲೆಗಳನ್ನು ತಾವೇ ಪರಿಶೀಲಿಸಿ ಕೊಂಡೊಯ್ದಿದ್ದಾರೆ. ಅಧಿಕಾರಿಗಳ ಈ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.