ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಯಲ್ಲಾಪುರ(Yallapur) : ತಾಲೂಕಿನ ಅರಬೈಲ್ ಘಟ್ಟದಲ್ಲಿ(Arebeial Ghat) ಭಾನುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ.

ಲಾರಿಗಳ ನಡುವೆ ಸಿಲುಕಿ ಕಾರೊಂದು(Car) ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಪ್ರವಾಸಕ್ಕೆಂದು ಬಂದಿದ್ದ ತಾಯಿ ಮತ್ತು ಮಗಳು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರು ಮಹಾರಾಷ್ಟ್ರದ ಪುಣೆಯ ಮೂಲದವರೆಂದು (Maharashtra Pune Native)ತಿಳಿದುಬಂದಿದೆ.

ಪುಣೆಯ(Pune) ಹಡಪ್ಸರ್‌ನ ತ್ರಿವೇಣಿನಗರದ ನಿವಾಸಿಗಳಾದ ಶರ್ಮಿಳಾ ರಾಜನ್ ಕುಲ್ಲೆ(59) ಹಾಗೂ ಮಗಳು ಮೃಣ್ಮಯಿ ರಾಜನ್ ಕುಲ್ಲೆ(27) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಹೊಸಪೇಟೆ ಮೂಲದ ಚಾಲಕ ಆಲಂಬಾಷಾ ಅವರು ದುರಂತದಲ್ಲಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೊಸಪೇಟೆಯಿಂದ(Hospete) KA-35/D-8298 ನಂಬರಿನ ಕಾರನ್ನು ಬಾಡಿಗೆಗೆ ಪಡೆದಿದ್ದ ತಾಯಿ-ಮಗಳು, ಬಾದಾಮಿಯ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ಅಲ್ಲಿಂದ ಗೋಕರ್ಣದತ್ತ ಪ್ರಯಾಣ ಬೆಳೆಸಿದ್ದರು. ಭಾನುವಾರ ರಾತ್ರಿ ಸುಮಾರಿಗೆ ಕಾರು ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ(Yallapur arebail Ghat) ಬಳಿ ತೆರಳುತ್ತಿದ್ದಾಗ ಈ ಅವಘಢ ಸಂಭವಿಸಿದೆ.

ಅಪಘಾತದಲ್ಲಿ ತೀವೃ ಗಾಯಗೊಂಡ ತಾಯಿ ಮತ್ತು ಮಗಳನ್ನ ಆಸ್ಪತ್ರೆಗೆ ತರುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡ ಕಾರು ಚಾಲಕ ಆಲಂಬಾಷಾ ಅವರು ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವಾಗಿ ಪರಾರಿಯಾಗಿರುವ ಲಾರಿ ಚಾಲಕನ ಪತ್ತೆಗಾಗಿ ಯಲ್ಲಾಪುರ ಪೊಲೀಸರು(Yallapur Police) ತನಿಖೆ ನಡೆಸಿದ್ದಾರೆ.