ಶಿರಸಿ : ಮಾಜಿ ಸಂಸದ ಅನಂತಕುಮಾರ ಹೆಗಡೆಯವರ ಮನೆಯಲ್ಲಿ  ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ವಸ್ತುಗಳು ಸುಟ್ಟು ಹೋದ ಘಟನೆ ನಡೆದಿದೆ.

ಶಿರಸಿ ನಗರದ ಕೆ ಎಚ್ ಬಿ ಕಾಲೋನಿಯಲ್ಲಿರುವ ಅನಂತಕುಮಾರ ಹೆಗಡೆಯವರ ಮನೆಯ ಮೇಲಭಾಗದ  ಜಿಮ್ ನಲ್ಲಿ ಇಂದು ಬೆಳಿಗ್ಗೆ 4-30 ಗಂಟೆಗೆ ಬೆಂಕಿ ಕಾಣಿಸಿತ್ತು. ಪರಿಣಾಮವಾಗಿ ಜಿಮ್ ಉಪಕರಣಗಳು ಸುಟ್ಟು ಸುಟ್ಟು ಹೋಗಿದೆ.

ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. .ಮಾಜಿ ಸಂಸದರು ಮತ್ತು ಕುಟುಂಬದವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಆಗಿರಬಹುದೆಂದು ಶಂಕಿಸಲಾಗಿದೆ.