ಶಿರಸಿ: ನಗರ ಠಾಣೆ ಪೊಲೀಸರು ಅಕ್ರಮ ಗಾಂಜಾ ಸಾಗಾಟ,ಮಾರಾಟ ಮತ್ತು ಸೇವನೆ  ಮಾಡುವವರ ಮೇಲೆ ದಾಳಿ ಮುಂದುವರೆಸಿದ್ದಾರೆ.

ಗಾಂಜಾ ಸೇವನೆ ಮಾಡುತ್ತಿದ್ದ  ಇರ್ವರನ್ನು ಬಂಧಿಸಿದ್ದಾರೆ. ಮುರುಡೇಶ್ವರ ಕಾಲೋನಿ ಹತ್ತಿರ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ  ಮಾರುತಿಗಲ್ಲಿಯ ನಾಗರಾಜ ರಾಜು ಹರಿಜನ  ಶಿರಸಿ ಮತ್ತು ಕೋರ್ಟ್ ರಸ್ತೆ ದೇವಿಕೆರೆಯ ವಿನಯ ಗಣಪತಿ ಹರಿಜನ  ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಣೆಗೆ ಒಳಪಡಿಸಲಾಗಿತ್ತು, ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು ಇರ್ವರ ವಿರುದ್ದ ಶಿರಸಿ‌ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ  ಎನ್ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ  ಸಿ.ಟಿ ಜಯಕುಮಾರ್  ಶಿರಸಿ ಉಪ ವಿಭಾಗದ ಡಿಎಸ್ಪಿ  ಗಣೇಶ ಕೆ‌ಎಲ್, ಶಿರಸಿ ವೃತ್ತ ನಿರೀಕ್ಷಕ  ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ನೇತೃತ್ವದಲ್ಲಿ  ಸಿಬ್ಬಂದಿಗಳಾದ ಹನುಮಂತ ಕಬಾಡಿ, ಪ್ರಶಾಂತ ಪಾವಸ್ಕರ್, ನಾಗಪ್ಪ ಲಮಾಣಿ, ಸದ್ದಾಂ ಹುಸೇನ್, ಮಂಜುನಾಥ ಕಾಶಿಕೋವಿ ಪ್ರವೀಣ್ ಎನ್ ರವರು  ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.