ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bangaluru): ಖ್ಯಾತ ಗಾಯಕ ಸೋನು ನಿಗಮ್(Sonu Nigam) ಕಾರ್ಯಕ್ರಮವೊಂದರಲ್ಲಿ ಕನ್ನಡಿಗರ ಮೇಲೆ ನಾಲಿಗೆ ಹರಿಬಿಟ್ಟಿದ್ದಾರೆ. ಅವರ ವಿರುದ್ಧ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರಿನ(Bangaluru) ಕಾಲೇಜೊಂದರ ಜರುಗಿದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್(Sonu Nigam) ಹಿಂದಿ ಹಾಡು (Hindi Song)ಹಾಡುತ್ತಿದ್ದರು. ಆಗ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು(Kannada Song) ಹಾಡುವಂತೆ ಬೇಡಿಕೆ ಇಟ್ಟಿದ್ದ. ಇದರಿಂದ ಸಿಟ್ಟಾದ ಸೋನು ನಿಗಮ್ ಪಹಲ್ಗಾಮ್ನಲ್ಲಿ(Pehalgam) ನಡೆದ ಘಟನೆಯ ಕಾರಣ ಇದೇ ಎಂದು ಹೇಳಿದ್ದಾರೆ.
ಹೀಗಾಗಿ ಗಾಯಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರು ಎಷ್ಟು ಸಹಿಸಿಕೊಳ್ಳಬೇಕು. ಇಂತಹವನನ್ನ ಕರೆಯಿಸಿ ಹಾಡು ಹೇಳಿಸುವುದನ್ನ ಬಿಡಬೇಕು. ಕರ್ನಾಟಕ ಪೊಲೀಸರು ಗಾಯಕ(Singer) ಮಾತನಾಡಿರುವ ವಿಡಿಯೋ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಇಂತಹ ಗಾಯಕ ಕನ್ನಡ ಹಾಗೂ ಕನ್ನಡಿಗರ ಮೇಲೆ ಅವಮಾನ ಮಾಡಿದ್ದು ತಪ್ಪು. ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮವಹಿಸಬೇಕೆಂದು ದೂರು ಕನ್ನಡ ರಕ್ಷಣಾ ವೇದಿಕೆ ದೂರು ನೀಡಿದೆ. ಪೊಲೀಸರು ಸೋನು ನಿಗಮ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಇದನ್ನು ಓದಿ: ಮಕ್ಕಳ ಬಗ್ಗೆ ಪಾಲಕರೇ ಎಚ್ಚರ. ಸಿಮೆಂಟ್ ಚೌಕಟ್ಟು ತೆಗೆಯಿತು ಮಗುವಿನ ಪ್ರಾಣ.
ರಾಜ್ಯದಲ್ಲಿ 22 ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್. ಶಿರಸಿಯ ಶಾಗುಫ್ತ ಅಂಜುಮ್ ಸಾಧನೆ.