ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಪಟ್ಟಣದ  ಸೋನಾರಕೇರಿಯ(Sonarakeri) ಜಂಬರಮಠದ ಕೆರೆಯಲ್ಲಿ ಮೀನು‌ ಹಿಡಿಯಲು ಹೋಗಿದ್ದ ವಿದ್ಯಾರ್ಥಿಯೋರ್ವ(Student) ಮುಳುಗಿ(Drowned) ಸಾವನ್ನಪ್ಪಿದ ಘಟನೆ ನಡೆದಿದೆ.

ದಿ ನ್ಯೂ ಇಂಗ್ಲೀಷ್ ಶಾಲೆಯ(The New New English) 10 ನೇ ತರಗತಿಯ ವಿದ್ಯಾರ್ಥಿ ಶಶಿಧರ ಯೋಗೇಶ ಮೊಗೇರ ಮೃತ ದುರ್ದೈವಿ. ಇಂದು ಶಾಲೆಗೆ ರಜೆ ಇದ್ದುದರಿಂದ ಶಾಲೆಗೆ ತೆರಳಿ ಬಳಿಕ ಐದಾರು ಸ್ನೇಹಿತರೊಂದಿಗೆ  ಕೆರೆಗೆ ಗಾಳದೊಂದಿಗೆ ಮೀನು ಹಿಡಿಯಲು ಹೋಗಿದ್ದ ಎನ್ನಲಾಗಿದೆ.‌ ಈ ಸಂದರ್ಭದಲ್ಲಿ ಕಾಲು ಜಾರಿ ಬಾಲಕ ನೀರಿಗೆ ಬಿದ್ದಿದ್ದಾನೆ.

ಜಂಬೂರಮಠ ಕೆರೆ(Jambooramath Kere)  ತಳದಲ್ಲಿ  ಅಂಟು ಮಣ್ಣಿನ ಕೆಸರಿರುವುದರಿಂದ    ಅಪಾಯಕಾರಿಯಾಗಿತ್ತು. ನೀರಿಗೆ ಬಿದ್ದ ಶಶಿಧರ ಈಜು ಬಾರದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ವೆಂಕಟಾಪುರದ ನಿವಾಸಿ  ಟ್ಯಾಕ್ಸಿ ಚಾಲಕ ಯೋಗೇಶ್ ಮೊಗೇರ ಅವರ ಪುತ್ರ ಎಂದು ತಿಳಿದುಬಂದಿದೆ

ಸ್ಥಳಕ್ಕೆ ಭಟ್ಕಳ ಶಹರ ಠಾಣೆ(Bhatkal Town Station) ಪೊಲೀಸರು ‌ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ತರಲಾಗಿದ್ದು‌ ನೂರಾರು‌‌ ಸಂಖ್ಯೆಯ ನಾಗರಿಕರು ಸೇರಿದ್ದಾರೆ. ಬಾಲಕನ ಸಾವಿಗೆ ಆಕ್ರಂದನ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಹೆದ್ದಾರಿಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ‌ಬೆಂಕಿ. ಸ್ಥಳದಲ್ಲಿ ಆತಂಕದ ವಾತಾವರಣ.

ಶಾಸಕ ಸತೀಶ್ ಸೈಲ್ ಜಾಮೀನು ರದ್ದು. ಮತ್ತೆ ಜೈಲು‌ ಸೇರುವ ಸಾಧ್ಯತೆ.

ಲಿಪ್ಟ್ ಕೆಳಕ್ಕೆ ಬಿದ್ದು ಇಬ್ಬರು ಕಾರ್ಮಿಕರು ಮೃತ್ಯು. ಮುರ್ಡೇಶ್ವರದ ಕಾಮತ್ ಯಾತ್ರಿ ನಿವಾಸದಲ್ಲಿ ಘಟನೆ.

ಮುರ್ಡೇಶ್ವರ ಮತ್ತು ಭಟ್ಕಳ ಗ್ರಾಮೀಣ ಪೊಲೀಸರ ಕಾರ್ಯಾಚರಣೆ. ಮೂವರ ಮೇಲೆ ಪ್ರಕರಣ.

ಕರ್ತವ್ಯದಲ್ಲಿರುವಾಗ ಬಿಸಿಯೂಟದ ಕೋಣೆಯಲ್ಲಿ ಕುಸಿದು ಬಿದ್ದ ಮಹಿಳೆ ಸಾವು