ಮಂಗಳೂರು(MANGLORE): ಹೆದ್ದಾರಿ ಮಧ್ಯೆ ಬಿಎಂಡಬ್ಲ್ಯೂ ಕಾರು ಹೊತ್ತಿ ಉರಿದ ಘಟನೆ ಅಡ್ಯಾರು ಸಹ್ಯಾದ್ರಿ ಕಾಲೇಜಿನ ಬಳಿ ಸಂಭವಿಸಿದೆ.
ದೆಹಲಿ ನೊಂದಣಿಯ ಬಿಎಂಡಬ್ಲ್ಯೂ ಕಾರು (BMW CAR) ಇದಾಗಿದ್ದು ರಸ್ತೆ ಮಧ್ಯೆದಲ್ಲಿ ಧಗ ಧಗ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹತ್ತಿದ ಕೂಡಲೇ ಚಾಲಕ ಕಾರಿನಿಂದ ಹೊರಗಿಳಿದಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದಾನೆ.
ಶಾರ್ಟ್ ಸರ್ಕ್ಯೂಟ್ ನಿಂದ ಕಾರಿಗೆ ಬೆಂಕಿ ತಗುಲಿರುವ ಸಾಧ್ಯತೆ ಇದೆ. ಹೆದ್ದಾರಿ ಮಧ್ಯದಲ್ಲೇ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕಳೆದ ಕೆಲ ದಿನಗಳ ಹಿಂದೆ ಸುರತ್ಕಲ್(SURATKAL) ಎನ್ಐಟಿಕೆ (NITK) ಸಮೀಪ ಬಿಎಂಡಬ್ಲ್ಯೂ ಕಾರು ಸುಟ್ಟು ಕರಕಲಾಗಿತ್ತು.
ಇದನ್ನು ಓದಿ : ನದಿಗೆ ಜಿಗಿದ ಮಹಿಳೆ ಸಾವು