ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಖಾಸಗಿ ಶಾಲೆಯೊಂದರಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು(Students) ಶಾಲೆ ಬಿಟ್ಟ ಬಳಿಕ ಮನೆಗೆ ಮರಳದೇ ನಾಪತ್ತೆಯಾಗಿ(Missing) ಆತಂಕ ಮೂಡಿಸಿದ ಘಟನೆ ನಡೆದಿದೆ.
ಶನಿವಾರ ಮಧ್ಯಾಹ್ನ ಶಾಲೆ ಮುಗಿದ ನಂತರ ಇಬ್ಬರು ವಿದ್ಯಾರ್ಥಿಗಳು ಸೈಕಲ್ ಮೂಲಕ ಶಿರವಾಡದ ರೈಲ್ವೆ ನಿಲ್ದಾಣಕ್ಕೆ(Shirwad Railway Station) ತೆರಳಿದ್ದರು. ರೈಲು ನಿಲ್ದಾಣದ ದಾರಿ ಸರಿಯಾಗಿ ತಿಳಿಯದೇ, ಮಾರ್ಗಮಧ್ಯೆ ಸಾರ್ವಜನಿಕರನ್ನು ಪ್ರಶ್ನಿಸುತ್ತಾ ಸಾಗಿದ್ದಾರೆ ಎನ್ನಲಾಗಿದೆ. ಈ ವೇಳೆ, ಅದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಇವರನ್ನು ದಾರಿ ಕೇಳುತ್ತಿರುವುದನ್ನು ಗಮನಿಸಿ, ತಕ್ಷಣವೇ ವಿಷಯವನ್ನು ವಿದ್ಯಾರ್ಥಿಗಳ ಪಾಲಕರಿಗೆ ತಿಳಿಸಿದ್ದಾನೆ.
ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪಾಲಕರು ಹಾಗೂ ಶಿಕ್ಷಕರು ಶಿರವಾಡ ರೈಲ್ವೆ ನಿಲ್ದಾಣಕ್ಕೆ ಧಾವಿಸಿ ಹುಡುಕಾಟ(Searching) ನಡೆಸಿದರು. ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇಬ್ಬರು ವಿದ್ಯಾರ್ಥಿಗಳು ದೆಹಲಿ(Dehali) ಕಡೆಗೆ ತೆರಳುವ ರೈಲನ್ನು ಹತ್ತಿರುವುದು ದೃಢಪಟ್ಟಿತು. ಕೂಡಲೇ ರೈಲ್ವೆ ಪೊಲೀಸರಿಗೆ(Railway Police) ಮಾಹಿತಿ ನೀಡಿ ಅಲರ್ಟ್ ಘೋಷಿಸಲಾಯಿತು.
ಸೂಚನೆಯ ಮೇರೆಗೆ ಕಾರ್ಯಾಚರಣೆ ನಡೆಸಿದ ಗೋವಾ ರೈಲ್ವೆ ಪೊಲೀಸರು(Goa Railway Police), ಚಲಿಸುತ್ತಿದ ರೈಲನ್ನು ತಡೆದು ಮಕ್ಕಳನ್ನು ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ(Madagaon Railway Station ) ಸುರಕ್ಷಿತವಾಗಿ ಪತ್ತೆಹಚ್ಚಿದ್ದಾರೆ. ಬಳಿಕ ಮಕ್ಕಳ ಆರೋಗ್ಯ ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳು ಪಾಲಕರಿಗೆ ಮಾಹಿತಿ ನೀಡಿದ್ದರಿಂದ ನಿಟ್ಟುಸಿರು ಬಿಡುವಂತಾಯಿತು.
ಘಟನೆ ಕೆಲಕಾಲ ಕಾರವಾರದಲ್ಲಿ ಆತಂಕ ಸೃಷ್ಟಿಸಿದರೂ, ಮತ್ತೊಬ್ಬ ವಿದ್ಯಾರ್ಥಿಯ ಸಮಯೋಚಿತ ಎಚ್ಚರಿಕೆ ಮತ್ತು ರೈಲ್ವೆ ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಇದನ್ನು ಓದಿ : ಕುಮಟಾ ಪೊಲೀಸ್ ಸಿಬ್ಬಂದಿಗೆ ‘ಕರ್ನಾಟಕ ಸೇವಾ ರತ್ನ’ ಪ್ರಶಸ್ತಿಯ ಗರಿ
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮದನ ನಾಯಕ ಹತ್ಯೆ ಪ್ರಕರಣ. ನ್ಯಾಯಾಲಯದಿಂದ ಆರೋಪಿಗೆ ಶಿಕ್ಷೆ.
ದಾಂಡೇಲಿಯ ಹಿರಿಯ ವಕೀಲ ಅಜಿತ್ ನಾಯಕ ಹತ್ಯೆ ಕೇಸ್. ನ್ಯಾಯಾಲಯದಿಂದ ತೀರ್ಪು ಪ್ರಕಟ.
